ಕಾಡಿಗೆ ಅಕ್ರಮ ಪ್ರವೇಶ: ವ್ಯಕ್ತಿ ಬಂಧನ

ಶುಕ್ರವಾರ, ಜೂಲೈ 19, 2019
24 °C

ಕಾಡಿಗೆ ಅಕ್ರಮ ಪ್ರವೇಶ: ವ್ಯಕ್ತಿ ಬಂಧನ

Published:
Updated:

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮೂಲೆಹೊಳೆ ಅರಣ್ಯ ವಲಯದ ಚಮ್ಮನಹಳ್ಳ ಕಾಡಿನಲ್ಲಿ ಅಕ್ರಮವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ವಶಕ್ಕೆ ಪಡೆದಿದ್ದಾರೆ.ಜಾರ್ಖಂಡ್ ಮೂಲದ ಮಾಕೋನ್ ಎಂಬುವವನೇ ಸಿಕ್ಕಿಬಿದ್ದ ವ್ಯಕ್ತಿ. ಈತನ ಬಳಿಯಿದ್ದ ಬೆಡ್‌ಶೀಟ್, ಪ್ಲಾಸ್ಟಿಕ್ ಹೊದಿಕೆ, ಚಾಕು, ನೀರಿನ  ಬಾಟಲ್, ಬ್ಲೇಡು, ಪೆನ್ನು ಮತ್ತು 50 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಈತ ನಕ್ಸಲ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾನೆಯೇ ಅಥವಾ ಇಲ್ಲವೆ ಎನ್ನುವ ಬಗ್ಗೆ ವಿಚಾರಣೆ ನಡೆಸಿದ ನಂತರವೇ ತಿಳಿಯಬಹುದೆಂದು ಎಂದು ಹುಲಿ ಯೋಜನೆಯ ನಿರ್ದೇಶಕ ಕುಮಾರ್ ಪುಷ್ಕರ್ ಅವರು `ಪ್ರಜಾವಾಣಿ~ಗೆ ತಿಳಿಸಿದರು.ಕಳೆದ ವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ಹುಲಿಯನ್ನು ಕೊಲ್ಲಲು  ಜಾ ಟ್ರ್ಯಾಪ್ ಹಾಕಿ ಸಿಕ್ಕಿಬಿದ್ದಿದ್ದವನನ್ನು, ಹರಿಯಾಣ ಮೂಲದವನು ಎಂದು ತಿಳಿದು ಬಂದಿದೆ. ಈತನ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತಾಲ್ಲೂಕಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 15 ದಿವಸಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry