ಭಾನುವಾರ, ಜನವರಿ 26, 2020
28 °C
ಹುಣಸೂರು, ಕೆ.ಆರ್. ನಗರದಲ್ಲಿ ಕಾಡಾನೆ ಹಾವಳಿ

ಕಾಡಿಗೆ ಅಟ್ಟಲು ದಸರಾ ಆನೆಗಳ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು/ಕೆ.ಆರ್. ನಗರ: ಕಾಡಾನೆಗಳ ದಾಳಿ ಹುಣಸೂರು ಹಾಗೂ ಕೆ.ಆರ್‌. ನಗರ ತಾಲ್ಲೂಕಿನಲ್ಲಿ ಗುರುವಾರವೂ ಮುಂದುವರಿದ್ದು, ನಾಗರಿಕರಲ್ಲಿ ತೀವ್ರ ಆತಂಕ ಮೂಡಿದೆ.ಮಂಗಳವಾರ ರಾತ್ರಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೀರನಹೊಸಹಳ್ಳಿಯಿಂದ ತಟ್ಟೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಮುಸುಕಿನಜೋಳ ಫಸಲಿನ ಹೊಲಗಳಿಗೆ ದಾಳಿ ಇಟ್ಟು ಅಹೋರಾತ್ರಿ ಬೀಡುಬಿಟ್ಟಿದ್ದವು. ಬುಧವಾರ ಬೆಳಿಗ್ಗೆ ಕಳ್ಳಬೆಟ್ಟ ಅರಣ್ಯದಲ್ಲಿ ಬೀಡುಬಿಟ್ಟಿದ್ದ 7 ಕಾಡಾನೆಗಳಿದ್ದ ಹಿಂಡು, ಗುರುವಾರ ಬೆಳಗಿನ ಜಾವ ಯಶೋದಪುರ, ನಾಗನಹಳ್ಳಿ, ತಿಪ್ಪಲಾಪುರ, ನಾಗನಹಳ್ಳಿ, ಕಟ್ಟೆಮಳ ಲವಾಡಿ, ರಾಮಪಟ್ಟಣ, ಕಿರುಸೊಡ್ಲು, ಹಗರನಹಳ್ಳಿ, ಕೆಬ್ಬೆಕೊಪ್ಪಲು, ಶ್ರವಣನಹಳ್ಳಿ, ರಾಯನಹಳ್ಳಿ ಭಾಗಗಳ ಗದ್ದೆ ಬಯಲಿನಲ್ಲಿ ಸಾಗಿ ಭತ್ತ, ರಾಗಿ ಮತ್ತು ಮುಸುಕಿನ ಜೋಳ ಬೆಳೆಗಳನ್ನು ನಾಶಪಡಿಸಿದೆ.ಇಬ್ಭಾಗವಾದ ಹಿಂಡು: ಶ್ರವಣನಹಳ್ಳಿ ತಲುಪುತ್ತಿ ದ್ದಂತೆ 7 ಆನೆಗಳಿದ್ದ ಹಿಂಡು ಎರಡು ಭಾಗವಾಗಿ ಎರಡು ಗಂಡಾನೆಗಳು ಕೆ.ಆರ್‌. ನಗರ ತಾಲ್ಲೂಕಿನ ಡೋರನಹಳ್ಳಿಯತ್ತ ಹೆಜ್ಜೆ ಹಾಕಿದವು. ಉಳಿದ 5 ಆನೆಗಳ ಹಿಂಡು ಬಿಳಿಕೆರೆ ಹೋಬಳಿ ಅರಬ್ಬಿತಿಟ್ಟು ಸಾಮಾಜಿಕ ಅರಣ್ಯ ಪ್ರದೇಶಕ್ಕೆ ತೆರಳಿದವು.ದ್ವಿಚಕ್ರ ವಾಹನ ಜಖಂ: ಶ್ರವಣನಹಳ್ಳಿ ನಿವಾಸಿ ಬಸವರಾಜ್‌ ಎಂಬುವವರು ಗುರುವಾರ ಬೆಳಿಗ್ಗೆ ಮಾದಾಪುರದಲ್ಲಿನ ಹಾಲಿನ ಕೇಂದ್ರಕ್ಕೆ ಹಾಲು ಹಾಕಿ ಹಿಂದಿರುಗುತ್ತಿದ್ದ ವೇಳೆ ಕಾಡಾನೆಗಳನ್ನು ಕಂಡು ಗಾಬರಿಯಿಂದ ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಕಾಡಾನೆಗಳು ಬೈಕ್ ಜಖಂಗೊಳಿಸಿವೆ.ಕಾರ್ಯಾಚರಣೆಗೆ ಆನೆ ತಂಡ: ಕಾಡಾನೆಗಳ ದಾಳಿ ತಡೆಗಟ್ಟಿ ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕಾಡಾನೆ ಹಾವಳಿ ತಡೆಯಲು ಕುಶಾಲನಗರದ ದುಬಾರೆ ಆನೆ ಕ್ಯಾಂಪಿನಿಂದ ಗೋಪಾಲಸ್ವಾಮಿ, ರಾಜೇಂದ್ರ ಮತ್ತು ಮತ್ತಿಗೋಡು ಆನೆ ಶಿಬಿರದಿಂದ ಅಭಿಮನ್ಯು, ಭೀಮ ಮತ್ತು ವಿಕ್ರಮ ಆನೆಗಳನ್ನು ಕರೆಸಲಾಯಿತು. ಈ ಆನೆಗಳು ಮಧ್ಯಾಹ್ನ 2 ಗಂಟೆಗೆ ಹುಣಸೂರು ಪಟ್ಟಣವನ್ನು ಹಾದು ಬಿಳಿಕೆರೆ ಹೋಬಳಿ ಅರಬ್ಬಿತಿಟ್ಟು ಅರಣ್ಯ ಪ್ರದೇಶ ಸೇರಿದವು. ಸಾಕಾನೆಗಳನ್ನು ಬಳಸಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಪ್ರಯತ್ನ ನಡೆಸಲಾ ಗುವುದು ಎಂದು ಡಿಸಿಎಫ್‌ ವಿಜಯ ಕುಮಾರ್‌ ತಿಳಿಸಿದ್ದಾರೆ.ಜಂಟಿ ಕಾರ್ಯಾಚರಣೆ: ಅರಬ್ಬಿತಿಟ್ಟು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಿಂಡನ್ನು ಕಾಡಿಗೆ ಅಟ್ಟಲು ಮೈಸೂರು ವನ್ಯಜೀವಿ ವಿಭಾಗ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ, ಹುಣಸೂರು ವನ್ಯಜೀವಿ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಿವೆ.ಇದರೊಂದಿಗೆ ಕೆ.ಆರ್. ನಗರ ತಾಲ್ಲೂಕಿನ ಡೋರನಹಳ್ಳಿ ಬಳಿಯ ತೋಪೊಂದರಲ್ಲಿ ನುಗ್ಗಿ ಅಲ್ಲಿರುವ ಬಿದಿರುಮರ ತಿನ್ನುತ್ತ ಇಡೀ ದಿನ ಕಾಲಕಳೆದವು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಕಾರ್ಯಾಚರಣೆಗೆ ಇಳಿದರು.ಡಿ.11ರಂದು ಹುಣಸೂರು ತಾಲ್ಲೂಕಿನ ತಟ್ಟೆಕೆರೆ ಮತ್ತು ಕಡ್ಲೂರು ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಆನೆ ಹಿಂಡಿನಿಂದ ಈ ಎರಡು ಆನೆಗಳು ತಪ್ಪಿಸಿಕೊಂಡು ತಾಲ್ಲೂಕಿನ ಜಮೀನುಗಳಲ್ಲಿ ಕಾಣಿಸಿಕೊಂಡಿವೆ.

ಪ್ರತಿಕ್ರಿಯಿಸಿ (+)