ಕಾಡಿನ ಮಾಂತ್ರಿಕತೆ

7

ಕಾಡಿನ ಮಾಂತ್ರಿಕತೆ

Published:
Updated:
ಕಾಡಿನ ಮಾಂತ್ರಿಕತೆ

ದಟ್ಟ ಅರಣ್ಯ, ಬೆಟ್ಟ, ಗುಡ್ಡ, ಬೆಟ್ಟದಲ್ಲಿ ಬಾಲ್ಯ ಕಳೆದು, ಜಲಪಾತಗಳಲ್ಲಿ ಧುಮ್ಮಿಕ್ಕಿ ನೆಗೆದು ಮಂದಗಮನೆಯಾಗಿ ಸಮುದ್ರ ಸೇರುವ ನದಿ... ಕಲಾವಿದೆ ಜಿ.ಎಸ್ ಭವಾನಿ ಅವರನ್ನು ಸದಾ ಕಾಡುವ ಸಂಗತಿಗಳಿವು.ಆಕೆ ಮೂಲತಃ ಕೊಡಗಿನವರು. ಹೀಗಾಗಿ ಅಲ್ಲಿಯೇ ಹುಟ್ಟಿದ ಕಾಡು ಮತ್ತು ಕಾವೇರಿಯೆಂದರೆ ಅದಮ್ಯ ಸೆಳೆತ. ಕಾಡಿಗೊಂದು ಮಾಂತ್ರಿಕ ಶಕ್ತಿಯಿದೆ. ಕೊಡಗಿನ ಕಾಡಿನಲ್ಲಿ ಓಡಾಡುವಾಗ ತಮ್ಮನ್ನು ತಾವೇ ಮರೆಯುವುದಾಗಿ ಮತ್ತು ತಮ್ಮನ್ನು ಅಲ್ಲಿ ಕಂಡುಕೊಳ್ಳುವುದಾಗಿ ಭವಾನಿ ಹೇಳುತ್ತಾರೆ.ಅವರು ನುರಿತ ಛಾಯಾಗ್ರಾಹಕಿಯೂ ಹೌದು. ಪ್ರಸ್ತುತ ಕಲಾಕೃತಿಗಳನ್ನು ಚಿತ್ರಿಸುವುದರ ಜತೆ ‘ಜರ್ನಿ ವಿತ್ ರಿವರ್ ಕಾವೇರಿ’ ಎಂಬ ಯೋಜನೆ ಕೈಗೊಂಡಿದ್ದಾರೆ. ಕಾವೇರಿ ನದಿ ಹುಟ್ಟಿದಾಗಿನಿಂದ ಸಮುದ್ರ ಸೇರುವವರೆಗೆ ಅದರ ಪಥದಲ್ಲಿ ಚಲಿಸಿ ವಿಡಿಯೋ ಚಿತ್ರ ನಿರ್ಮಿಸುವುದು ಈ ಯೋಜನೆ ಉದ್ದೇಶ.ಕಾಡಿನ ನಿಗೂಢತೆ, ಭವ್ಯತೆಯನ್ನು ಅವರು ಸೆರೆ ಹಿಡಿದ ಕಲಾಕೃತಿಗಳ ಪ್ರದರ್ಶನ ಹ್ಯಾಬಿಟ್ ಆರ್ಟ್ ಗ್ಯಾಲರಿಯಲ್ಲಿ ಸದ್ಯ ನಡೆಯುತ್ತಿದೆ. ಪ್ರದರ್ಶನ ಮಂಗಳವಾರ ಮುಕ್ತಾಯಸ್ಥಳ: 3 ಹ್ಯಾಬಿಟ್ ಆರ್ಟ್, ಕೃಷ್ಣಾ ಗಾರ್ಡನ್,

5ನೇ ಮುಖ್ಯರಸ್ತೆ, 1ನೇ ಬ್ಲಾಕ್, ಕೋರಮಂಗಲ.

ಬೆಳಿಗ್ಗೆ 11ರಿಂದ ಸಂಜೆ 7.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry