ಶುಕ್ರವಾರ, ಫೆಬ್ರವರಿ 26, 2021
27 °C
ಅಂಕುರ 81

ಕಾಡುವ ಆತಂಕಗಳು

ಡಾ. ಎಸ್.ಎಸ್. ವಾಸನ್,ಆ್ಯಂಡ್ರೊಲಜಿಸ್ಟ್ Updated:

ಅಕ್ಷರ ಗಾತ್ರ : | |

ಕಾಡುವ ಆತಂಕಗಳು

ಮಾನ್ಯವಾಗಿ ಎದುರಾಗುವ ಕೆಲವು ಆತಂಕಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.* ಮೂತ್ರ ವಿಸರ್ಜಿಸುವಾಗ ಉರಿ ಕಂಡು ಬಂದಲ್ಲಿ ಏನರ್ಥ...?

ಉರಿ ಮೂತ್ರ ಅಥವಾ ಮೂತ್ರ ವಿಸರ್ಜಿಸುವ ಮುನ್ನ ನೋವು, ಉರಿ ಕಂಡು ಬಂದಲ್ಲಿ ಸೋಂಕು ಆಗಿದೆ ಎಂದರ್ಥ. ಒಂದೋ ಮೂತ್ರನಾಳದ ಸೋಂಕು ಅಥವಾ ಲೈಂಗಿಕ ಸೋಂಕು ರೋಗದ ಲಕ್ಷಣವೂ ಆಗಿರಬಹುದು. ಉರಿಮೂತ್ರ ಸೋಂಕಿನ ಇತರ ಲಕ್ಷಣಗಳೆಂದರೆ ತುರ್ತಾಗಿ ಮೂತ್ರ ವಿಸರ್ಜಿಸಬೇಕು ಎಂದೆನಿಸುವುದು... ಆದರೆ ವಿಸರ್ಜಿಸಲು ಹೋದಾಗ... ಏನೂ ಬಾರದೇ ಇರುವುದು, ಗುಲಾಬಿ ಬಣ್ಣದ ಮೂತ್ರ ಅಥವಾ ಮೂತ್ರದಲ್ಲಿ ರಕ್ತ ಹೋಗುವಿಕೆ... ಬೆಳಗಿನ ಹೊತ್ತು ಗಾಢವಾದ ಅಥವಾ ಅತಿ ವಾಸನೆಯುಳ್ಳ ಮೂತ್ರ ವಿಸರ್ಜಿಸುವುದು, ಕಿಬ್ಬೊಟ್ಟೆಯಲ್ಲಿ ನೋವು. ಈ ಎಲ್ಲ ಲಕ್ಷಣಗಳೂ ಉರಿಮೂತ್ರ ಸೋಂಕಿನ ಲಕ್ಷಣಗಳಾಗಿವೆ. ಇಲ್ಲವೇ ಲೈಂಗಿಕ ರೋಗದ ಆರಂಭಿಕ ಲಕ್ಷಣಗಳೂ ಆಗಿರಬಹುದು. ತುರ್ತಾಗಿ ವೈದ್ಯರನ್ನು ಕಾಣದಿದ್ದಲ್ಲಿ ಆರೋಗ್ಯಕ್ಕೆ ಧಕ್ಕೆಯಾಗಬಹುದು.* ಶಿಶ್ನ ಸ್ರಾವವೆಂದರೆ ಏನು?

ಉಚ್ಚೆಯೂ ಅಲ್ಲದ, ವೀರ್ಯವೂ ಅಲ್ಲದ... ಒಂದು ಬಗೆಯ ದ್ರವ ಸ್ರವಿಸುತ್ತದೆ. ಕೆಲವೊಮ್ಮೆ ಇದು ಬೆಳ್ಳನೆಯ ಬಣ್ಣದಾಗಿರಬಹುದು ಅಥವಾ ತಿಳಿ ಹಳದಿ, ಹಸಿರು ಬಣ್ಣದ್ದಾಗಿರಬಹುದು. ವಾಸನೆಯಿಂದಲೂ ಕೂಡಿರಬಹುದು. ಇದು ಸ್ರಾವದ ಕಾರಣವನ್ನು ಅವಲಂಬಿಸಿರುತ್ತದೆ. ಇದು ಸಾಮಾನ್ಯವಾಗಿ ಎಸ್‌ಟಿಡಿ (ಲೈಂಗಿಕ ಸೋಂಕಿನ) ಲಕ್ಷಣವಾಗಿರಬಹುದು.* ಮುಂದೊಗಲಿನ ಸಮಸ್ಯೆಗಳೇನು?

ಸಾಮಾನ್ಯವಾಗಿ ಮುಂದೊಗಲಿದ್ದರೆ ಯಾವುದೇ ಸಮಸ್ಯೆಗಳಾಗುವುದಿಲ್ಲ. ಸುನ್ನತಿಯ ಅಗತ್ಯ ಎಲ್ಲರಿಗೂ ಇರುವುದಿಲ್ಲ. ಸುನ್ನತಿ ಮಾಡಿಸದವರಿಗೆ ಹಾಗೂ ಹೆಚ್ಚುವರಿ ಮುಂದೊಗಲನ್ನು ಹೊಂದಿದವರು ಈ ಸಮಸ್ಯೆಗಳನ್ನು ಎದುರಿಸಬಹುದು. ಶಿಶ್ನದ ತುದಿಯಲ್ಲಿ ಸೋಂಕು, ಅತಿ ಬಿಗಿಯಾಗಿದ್ದರೆ ಮುಂದೊಗಲು ಹಿಂದಕ್ಕೆ ಸರಿಸಲಾಗದು. ಕೆಲವೊಮ್ಮೆ ಬಲವಂತದಿಂದ ಹಿಂದೆಳೆದರೆ ಮತ್ತೆ ಮುಂದೆ ಬಾರದು. ಅದು ವೈದ್ಯಕೀಯ ತುರ್ತು ಸ್ಥಿತಿ ಎಂದೇ ಭಾವಿಸಬಹುದು. ಹೆಚ್ಚು ಎಳೆದಾಡಿದಲ್ಲಿ ನಿಮ್ಮ ಶಿಶ್ನಕ್ಕೆ ಗಾಯವಾಗಬಹುದು. ತೀರ ವಿರಳವಾದ ಸನ್ನಿವೇಶಗಳಲ್ಲಿ ಮುಂದೊಗಲು ಶಿಶ್ನದ ತುದಿಯ ಮೇಲೊಂದು ಟಿಶ್ಯುವನ್ನು ಹುಟ್ಟುಹಾಕಿರುತ್ತದೆ. ಇದರಿಂದಾಗಿ ಮುಂದೊಗಲನ್ನು ಹಿಂದಕ್ಕೆಳೆಯುವುದು ಅಸಾಧ್ಯವೇ ಆಗಬಹುದು. ಆಗ ಸುನ್ನತಿಯ ಅಗತ್ಯ ಕಂಡು ಬರಬಹುದು.* ಸುನ್ನತಿ ಎಂದರೇನು?

ಎಲ್ಲ ಗಂಡುಮಕ್ಕಳು ಮುಂದೊಗಲಿನಿಂದಲೇ ಜನಿಸಿರುತ್ತಾರೆ. ಜನನಾಂಗದ ತುದಿಯಲ್ಲಿರುವ ಹೆಚ್ಚುವರಿ ಚರ್ಮ ಇದು. ಸುನ್ನತಿ ಎಂದರೆ ವೈದ್ಯರಿಂದ ಅಥವಾ ಕೆಲವು ಸಂಸ್ಕೃತಿಗಳಲ್ಲಿ ಧಾರ್ಮಿಕ ಮುಖಂಡರು ಈ ಮುಂದೊಗಲನ್ನು ಶಿಶ್ನದಿಂದ ಬೇರ್ಪಡಿಸುತ್ತಾರೆ. ಬಹುತೇಕ ಪಾಲಕರು ತಮ್ಮ ಮಕ್ಕಳ ಮುಂದೊಗಲನ್ನು ತೆಗೆಯಲು ಇಷ್ಟ ಪಡುತ್ತಾರೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಕಾರಣ ಅಥವಾ ನೈರ್ಮಲ್ಯಕ್ಕಾಗಿಯೂ ಈ ಸುನ್ನತಿಗೆ ಮಹತ್ವ ನೀಡುತ್ತಾರೆ. ಇದಲ್ಲದೆ ಕೆಲವು ಬಾರಿ ವೈದ್ಯಕೀಯ ಅಗತ್ಯಗಳಿಂದಾಗಿಯೂ ಸುನ್ನತಿ ಅಗತ್ಯವಾಗಿ ಕಾಣಿಸಬಹುದು. ಒಂದಂತೂ ಮುಂದೊಗಲು ಹಿಂದಕ್ಕೆಳೆದಾಗ ಮತ್ತೆ ಮುಂಚೆಯ ಸ್ಥಿತಿಗೆ ಬಾರದಿದ್ದರೆ, ಇಲ್ಲವೇ ಮುಂದೊಗಲು ಹಾಗೂ ಶಿಶ್ನದ ನಡುವೆ ತೇವ ಉಳಿದರೆ ಬ್ಯಾಕ್ಟೇರಿಯಾ ಬೆಳೆಯಲು ಸಾಕಷ್ಟು ಅವಕಾಶಗಳಿರುತ್ತವೆ. ಇದು ಸೋಂಕು ಹರಡಲು ಕಾರಣವಾಗುತ್ತದೆ.* ಮುಂದೊಗಲು ಇರುವ ಹಾಗೂ ಮುಂದೊಗಲು ಇರದ ಶಿಶ್ನಗಳ ನಡುವಿನ ವ್ಯತ್ಯಾಸಗಳೇನು?

ಮುಂದೊಗಲು ಇದ್ದರೆ ಅಥವಾ ಇರದಿದ್ದರೆ ಶಿಶ್ನದ ಕಾರ್ಯವೈಖರಿಯಲ್ಲಿ ಯಾವ ವ್ಯತ್ಯಾಸಗಳೂ ಆಗುವುದಿಲ್ಲ. ಒಂದೇ ವ್ಯತ್ಯಾಸವೆಂದರೆ ಸುನ್ನತಿಯಾದವರಿಗೆ ಮುಂದೊಗಲು ಇರುವುದಿಲ್ಲ. ಆಗದವರಿಗೆ ಮುಂದೊಗಲು ಇರುತ್ತದೆ. ಆದರೆ ಸುನ್ನತಿಯಿಂದಾಗಿ ಹಲವಾರು ಅನುಕೂಲಗಳಿವೆ.ನೈರ್ಮಲ್ಯ: ಮುಂದೊಗಲು ಇರದ ಶಿಶ್ನವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತಿ ಸುಲಭವಾಗಿದೆ. ಶಿಶ್ನ ಮತ್ತು ಮುಂದೊಗಲಿನ ನಡುವೆ ತೇವಾಂಶ ಉಳಿಯುವುದಿಲ್ಲ. ಇದರಿಂದಾಗಿ ಉರಿಮೂತ್ರದ ಸೋಂಕು ಆಗುವ ಸಾಧ್ಯತೆಗಳು ಕಡಿಮೆ ಇರುತ್ತವೆ. ಕೆಲವೊಮ್ಮೆ ಸಣ್ಣ ಸೋಂಕುಗಳೆಂದೆ ಕಾಣಿಸುವ ಸಮಸ್ಯೆಗಳು ಮೂತ್ರಪಿಂಡದ ಕಾಯಿಲೆಯಾಗಿ ಬೆಳೆಯುವ ಸಾಧ್ಯತೆಗಳಿರುತ್ತವೆ.ಸುನ್ನತಿಯಾದವರಿಗೆ ಲೈಂಗಿಕ ರೋಗಗಳು ಅಂಟಿಕೊಳ್ಳುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ. ಆದರೂ ಸುರಕ್ಷಿತ ಲೈಂಗಿಕ ಕ್ರಿಯೆಗೆ ಹೆಚ್ಚಿನ ಮಹತ್ವ ನೀಡಿದರೆ ಸುನ್ನತಿಯಾಗದಿದ್ದವರೂ ನೈರ್ಮಲ್ಯ ಮತ್ತು ಆರೋಗ್ಯವಂತ ಲೈಂಗಿಕ ಜೀವನವನ್ನು ಹೊಂದಬಹುದಾಗಿದೆ. ಸುನ್ನತಿಯಾದ ಶಿಶ್ನವನ್ನು ಸ್ವಚ್ಛವಾಗಿಡುವುದು, ಶುಷ್ಕವಾಗಿಡುವುದು, ನಿರ್ಮಲವಾಗಿಡುವುದು ಅತಿ ಸುಲಭವಾಗಿದೆ. ಈ ಕಾರಣದಿಂದಾಗಿ ಯಾವುದೇ ಬ್ಯಾಕ್ಟೇರಿಯಾ ಆಥವಾ ಇನ್ನಿತರ ವೈರಾಣುಗಳು ನಿಮಗೆ ಅಥವಾ ನಿಮ್ಮ ಸಂಗಾತಿಗೆ ಬಾಧೆಯನ್ನುಂಟು ಮಾಡುವುದಿಲ್ಲ.ಸುನ್ನತಿಯಿಂದಾಗಿ ಲೈಂಗಿಕ ಕ್ರಿಯೆ ಅಥವಾ ಸುಖದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿಜ ಹೇಳುವುದಾದರೆ ಶೀಘ್ರ ಸ್ಖಲನವಾಗುವುದನ್ನು ತಡೆಯುತ್ತದೆ. ಆದರೆ ಸುನ್ನತಿಯನ್ನು ಮಾಡಿಸುವಾಗ ಕೆಲವು ಸಲ ಪ್ರಮಾದಗಳೂ ಆಗುತ್ತವೆ. ಕೆಲವರಿಗೆ ಮುಂದೊಗಲು ಇನ್ನಷ್ಟು ಉಳಿಯಬಹುದು. ಇನ್ನೂಕೆಲವರಿಗೆ ಅತಿ ಹೆಚ್ಚಾಗಿ ಬೇರ್ಪಡಿಸಬಹುದು. ಹೆಚ್ಚು ಬೇರ್ಪಟ್ಟ ಚರ್ಮವನ್ನು ಮತ್ತೆ ಮರುಜೋಡಿಸಬಹುದು. ಇದಕ್ಕೆ ಸಣ್ಣದೊಂದು ಶಸ್ತ್ರಚಿಕಿತ್ಸೆಯಾದರೆ ಸಾಕು.ಮುಂದಿನ ವಾರ ಇನ್ನಷ್ಟು ಆತಂಕಗಳು

ಮಾಹಿತಿಗೆ ಸಂಪರ್ಕಿಸಿ: 18002084444

info@manipalankur.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.