ಮಂಗಳವಾರ, ಜನವರಿ 28, 2020
19 °C

ಕಾಡೇನಹಳ್ಳಿ ಗೋಮಾಳ: ರೈತರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಳ್ಳಿ: ಗೋಮಾಳ ಉಳಿಸಿ ಎಂದು ಆಗ್ರಹಿಸಿ ಕಾಡೇನಹಳ್ಳಿ ಗ್ರಾಮಸ್ಥರು, ರೈತ ಮುಖಂಡರು ಸೋಮವಾರ ಪಟ್ಟಣ­ದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ರೈತ ಮುಖಂಡ ಮಲ್ಲಣ್ಣ ಮಾತ­ನಾಡಿ, ಪುರಸಭೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕ­ಪಕ್ಷೀಯ ನಿರ್ಧಾರ ತೆಗೆದು­ಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಡೇನಹಳ್ಳಿ ಗ್ರಾಮದ ಸರ್ವೆ ನಂ.31ರಲ್ಲಿ ಬರುವ 5.3 ಎಕರೆ ಗೋಮಾಳವನ್ನು ಕೆಎಸ್ಆರ್‌ಟಿ ಡಿಪೊ ನಿರ್ಮಾಣಕ್ಕಾಗಿ ಪುರಸಭೆ ಗುರುತಿಸಿದೆ. ಈ ಜಮೀನನ್ನು ಪುರಸಭೆ ವಶಕ್ಕೆ ನೀಡಬೇಕು ಎಂದು ಸದಸ್ಯರ ನಿಯೋಗ ಶಾಸಕರ ಸಮ್ಮುಖದಲ್ಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಗ್ರಾಮಸ್ಥರಿಗೆ ಆಘಾತ ಉಂಟು­ಮಾಡಿದೆ ಎಂದರು.ರೈತ ಮುಖಂಡ ಗಂಗಾಧರಪ್ಪ ಮಾತನಾಡಿ ನಮ್ಮದು ಕೃಷಿ ಬದುಕು. ದನ ಕರುಗಳಿಗೆ ಗೋಮಾಳ ಬೇಕು. ಇದರ ಜತೆ ಗ್ರಾಮದ ಮಧ್ಯದಲ್ಲಿರುವ ಹೆದ್ದಾರಿ ವಿಸ್ತರಣೆಯಾದರೆ ಮನೆ ಕಳೆದುಕೊಂಡವರು ಎಲ್ಲಿಗೆ ಹೋಗ­ಬೇಕು ಎಂಬುದೇ ತೋಚದಂತಾಗು­ತ್ತದೆ. ಗೋಮಾಳ ಉಳಿದರೆ ಇಲ್ಲಾ­ದರೂ ಮನೆ ಕಟ್ಟಿಕೊಳ್ಳಬಹುದು ಎಂದರು.ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಮಾತನಾಡಿ, ಅಭಿ­ವೃದ್ಧಿ ಹೆಸರಲ್ಲಿ ಗೋಮಾಳ ಕಬಳಿ­ಸುತ್ತಿರುವ ಪುರಸಭೆ ಆಡಳಿತದ ವಿರುದ್ಧ ಹಾಗೂ ಇದಕ್ಕೆ ಮೌನ ಸಮ್ಮತಿ ಸೂಚಿಸಿರುವ ಶಾಸಕರ ವಿರುದ್ಧ ಕಿಡಿಕಾರಿದರು.ಹೊನ್ನೆಬಾಗಿ ಗ್ರಾ.ಪಂ. ಅಧ್ಯಕ್ಷ ಗುರುಮೂರ್ತಿ, ತಮ್ಮಡಿಹಳ್ಳಿ ಮಲ್ಲಿಕಾರ್ಜುನಯ್ಯ, ಕಂಟಲಗೆರೆ ಸತೀಶ್, ತಿಮ್ಲಾಪುರ ಶಂಕರಣ್ಣ, ಬರಗೂರು ನಂಜುಂಡಯ್ಯ, ಲೋಕಣ್ಣ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)