ಗುರುವಾರ , ಜೂನ್ 24, 2021
29 °C

ಕಾಡ್ಗಿಚ್ಚು: ಶಾಶ್ವತ ಪರಿಹಾರ ರೂಪಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾರ್ಮಾಡಿ ಘಾಟ್‌ನ ಮೀಸಲು ದಟ್ಟಾರಣ್ಯದಲ್ಲಿ ಕೆಲವು ದಿನಗಳಿಂದ ಆವರಿಸಿರುವ ಕಾಡ್ಗಿಚ್ಚು ನೂರಾರು ಎಕರೆ ಪ್ರದೇಶವನ್ನು, ಅಪರೂಪದ ಜೀವಸಂಕುಲಗಳನ್ನು ಆಹುತಿ ತೆಗೆದುಕೊಂಡಿದೆ.

 

ಶ್ರೀಗಂಧ, ಬೀಟೆ, ಸಾಗುವಾನಿಯಂತಹ ಬೆಲೆಬಾಳುವ ಮರಗಳು ಸುಟ್ಟು ಕರಕಲಾಗುತ್ತಿವೆ. ಅಳಿವಿನ ಅಂಚಿನಲ್ಲಿರುವ ಅಪರೂಪದ ಜೀವ ಸಂಕುಲಗಳು ವಿನಾಶದತ್ತ ಸಾಗುತ್ತಿವೆ. ದಿನದಿನಕ್ಕೂ ಕಾಡ್ಗಿಚ್ಚು ದೊಡ್ಡದಾಗುತ್ತಿರುವುದು ಆತಂಕ ಉಂಟುಮಾಡಿದೆ.ಪ್ರತಿ ಬೇಸಿಗೆಯಲ್ಲೂ ಕಾಡ್ಗಿಚ್ಚಿನ ಸಮಸ್ಯೆ ಇದ್ದರೂ ಈ ಬೇಸಿಗೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಹರಡುತ್ತಿದೆ. ಬೆಂಕಿ ಬಿದ್ದ ಕಾಡು ಸಂಪೂರ್ಣ ನಾಶವಾಗುವುದನ್ನು ಸರ್ಕಾರ ನೋಡಿಕೊಂಡು ಸುಮ್ಮನಿರುವ ಬದಲು ಕಾಡ್ಗಿಚ್ಚು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು.

 

ಸ್ಥಳೀಯರ ಸಹಕಾರದೊಂದಿಗೆ ಕಾರ್ಯಪಡೆ ರಚಿಸಿ ಕಾರ್ಯಾಚರಣೆ ಕೈಗೊಳ್ಳುವ ಅಗತ್ಯವಿದೆ. ಇದು ದೊಡ್ಡ ಸಮಸ್ಯೆ ಇದಕ್ಕೊಂದು ಶಾಶ್ವತ ಪರಿಹಾರ ರೂಪಿಸಿ ರಾಜ್ಯದ ಕಾಡು ಹಾಗೂ ವನ್ಯ ಜೀವ ಸಂಕುಲವನ್ನು ರಕ್ಷಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.