ಶುಕ್ರವಾರ, ಮೇ 7, 2021
26 °C

ಕಾಣಿಯೂರು ಮಠ ಮುಖಮಂಟಪಕ್ಕೆ ಶಿಲಾನ್ಯಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕಾಣಿಯೂರು ಮಠ ಮುಖಮಂಟಪ ಕಾಮಗಾರಿಗೆ ಪರ‌್ಯಾಯ ಸೋದೆ ವಿಶ್ವವಲ್ಲಭತೀರ್ಥ ಸ್ವಾಮೀಜಿ ಗುರುವಾರ ಶಿಲಾನ್ಯಾಸ ನೆರವೇರಿಸಿದರು.ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮುಖಮಂಟಪ ಕಾಮಗಾರಿಯನ್ನು ಸೋದೆ ಮಠದ ಕಾಮಗಾರಿ ನಿರ್ವಹಿಸಿದ ಎಂಜಿನಿಯರ್ ಕೊಡವೂರು ನಾಗರಾಜ ಐತಾಳ ನಿರ್ವಹಿಸುವರು.

2013ರ ನರಸಿಂಹ ಜಯಂತಿ ವೇಳೆಗೆ ಉದ್ಘಾಟನೆಗೆ ಸಿದ್ಧವಾಗಲಿದೆ ಎಂದು ಕಾಣಿಯೂರು ಸ್ವಾಮೀಜಿ `ಪ್ರಜಾವಾಣಿ~ಗೆ ತಿಳಿಸಿದರು.ಮುಂದಿನ ಪರ‌್ಯಾಯೋತ್ಸವ ಪೂರ್ವಭಾವಿಯಾಗಿ ಈ ವರ್ಷದ ನರಸಿಂಹ ಜಯಂತಿಯಂದು ಮಠದ ಪರ‌್ಯಾಯ ಲಾಂಛನ ಹಾಗೂ ಮಠದ ವಿವರಗಳುಳ್ಳ ವೆಬ್‌ಸೈಟ್ ಬಿಡುಗಡೆಯಾಗಲಿದೆ. ಉಡುಪಿಯಲ್ಲಿರುವ ಹಳೆಯದಾದ ಕಾಣಿಯೂರು ಮಠವನ್ನು ಜೀರ್ಣೋದ್ಧಾರ ಮಾಡಲು ಉದ್ದೇಶಿಸಲಾಗಿದೆ ಎಂದರು.ಗೋಶಾಲೆ ನಿರ್ಮಾಣ, ವಿದ್ಯಾರ್ಥಿಗಳ ವಸತಿ, ಭೋಜನಶಾಲೆ, ಪ್ರವಚನ ಮಂದಿರ ಹೀಗೆ ಭಗವದ್ಭಕ್ತರಿಗೆ ಅನುಕೂಲವಾಗುವ ವಿವಿಧ ಕಾಮಗಾರಿ ನಿರ್ವಹಿಸಲು ಉದ್ದೇಶಿಸಿಸಲಾಗಿದೆ ಎಲ್ಲಾ ಕಾರ್ಯಗಳಿಗೆ ಭಗವದ್ಭಕ್ತರ ಸಹಕಾರ ಅಗತ್ಯ ಎಂದರು. ಕಾಣಿಯೂರು ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಈ ಸಂದರ್ಭದಲ್ಲಿ ಮಠದ ದಿವಾನರಾದ ರಘುಪತಿ ಆಚಾರ‌್ಯ, ನಾಗರಾಜ ಆಚಾರ‌್ಯ, ಮಾಧವ ಆಚಾರ‌್ಯ, ಶ್ರೀನಿವಾಸ, ಫಲಿಮಾರು ಮಠ ವ್ಯವಸ್ಥಾಪಕ ಬಲರಾಮ ಭಟ್ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.