ಕಾದು ಸುಸ್ತಾದ ಅಂಗವಿಕಲ ಮಕ್ಕಳು
ಹೊಸನಗರ: ಸರಿಯಾದ ಮಾಹಿತಿಯ ಕೊರತೆಯಿಂದ ತಾಲ್ಲೂಕಿನ ಅಂಗವಿಕಲ ಮಕ್ಕಳು ಹಾಗೂ ಪೋಷಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಬಂದ ಘಟನೆ ತಡವಾಗಿ ವರದಿಯಾಗಿದೆ.
ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ 6ರಿಂದ 14 ವರ್ಷ ವಯೋಮಿತಿಯ ಅಂಗವಿಕಲ ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರವು ಪಟ್ಟಣದ ಸರ್ಕಾರಿ ಮಾದರಿ ಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ನಿಗದಿಯಾಗಿತ್ತು.
ಆದರೆ, ತಾವು ದಾಖಲಾಗದ ಶಾಲೆಯ ಶಿಕ್ಷಕರು ಅಂಗವಿಕಲ ಮಕ್ಕಳ ಪೋಷಕರಿಗೆ ತಪ್ಪು ವೈದ್ಯಕೀಯ ವೇಳಾಪಟ್ಟಿಯ ಮಾಹಿತಿ ನೀಡಿದ ಕಾರಣ ಬೆಳಿಗ್ಗೆಯಿಂದಲೇ ಪೋಷಕರು ತಮ್ಮ ಅಂಗವಿಕಲ ಮಕ್ಕಳನ್ನು ಕರೆದತಂದು ಕಾಯುವ ಸ್ಥಿಗೆ ಬಂತು ಎಂದು ದೂರಿದರು.
ದೃಷ್ಟಿ, ಶ್ರವಣ, ಚಲನಾಂಗ ದೋಷ, ಬುದ್ಧಿಮಾಂದ್ಯತೆ ಹಾಗೂ ಬಹುವಿಕಲತೆಯ ಹೊಂದಿರುವ ಅಗತ್ಯ ಇರುವ ಮಕ್ಕಳಿಗೆ ಸಾಧನ, ಸಲಕರಣೆ ನೀಡುವ ಉದ್ದೇಶದ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಸುಮಾರು 108 ಮಕ್ಕಳು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.