ಕಾನನದ ಸುಪ್ತಭಾವಕ್ಕೆ ಯುವತಿಯ ಕನ್ನಡಿ

7

ಕಾನನದ ಸುಪ್ತಭಾವಕ್ಕೆ ಯುವತಿಯ ಕನ್ನಡಿ

Published:
Updated:

ಗುಲ್ಬರ್ಗ: ಪರಿಸರ ಕಾಳಜಿಯ ಅಭಿವ್ಯಕ್ತಿಗೆ ಬಣ್ಣ, ಕುಂಚಗಳ ಸಂಗಮ. ವನ, ವನ್ಯಪ್ರಾಣಿಗಳ ರಕ್ಷಣೆ, ಪೋಷಣೆ ಸಾರುವ ವರ್ಣಚಿತ್ರಗಳು. ಹಸಿರು ನಮ್ಮ ಉಸಿರು, ಅದನ್ನು ಉಳಿಸಿ ಎಂಬ ಪಿಸುಮಾತಿನ ಮನವಿ.ನಗರದ ಎಂಎಂಕೆ ದೃಶ್ಯಕಲಾ ಕಾಲೇಜಿನ ವಿದ್ಯಾರ್ಥಿನಿಯ ಆಶಯವಿದು. ಸಾಂಪ್ರದಾಯಿಕ ವರ್ಣಚಿತ್ರಕಲೆಯಲ್ಲಿ ಇವರದು ಉತ್ತಮ ಹೆಸರು. ಪರಿಸರ ಪ್ರೀತಿ, ಕಾಡಿನ ಮೇಲಿನ ದೌರ್ಜನ್ಯ, ಕಾನನದ ರೋದನ, ಹಸಿರಿನ ಉಳಿವು, ನಮ್ಮ ಹೊಣೆಗಾರಿಕೆ... ಇತ್ಯಾದಿ ಅಂಶಗಳ ಮನವರಿಕೆಗೆ ಅವರು ಆಯ್ದುಕೊಂಡಿದ್ದು ಕಲಾಕ್ಷೇತ್ರ. ಅವರ ಕಲಾಸಕ್ತಿಯ ಆಶಯ ವರ್ಣಚಿತ್ರಗ ಳನ್ನು ನೋಡಿದರೆ ಮನದಟ್ಟಾಗುತ್ತದೆ. ಈ ಆಶಯ ಜನರಿಗೆ ತುಲುಪಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಕಂಡಿದ್ದಾರೆ.ನೀಲಮ್ಮಾ ಹೊಸಮನಿ ಬಿಸಿಲ ನಾಡಿನ ಕಲಾ ಪ್ರತಿಭೆ. ನಗರದ ಎಂಎಂಕೆ ದೃಶ್ಯಕಲಾ ಕಾಲೇಜಿನ ‘ಎಂವಿಎ’ ಅಂತಿಮ ವರ್ಷದ ವಿದ್ಯಾರ್ಥಿನಿ. 7 ವರ್ಷದಲ್ಲಿ 200ಕ್ಕೂ ಹೆಚ್ಚು ವರ್ಣ ಚಿತ್ರಗಳು ಇವರ ಕುಂಚದಲ್ಲಿ ಜೀವಪಡೆ ದಿವೆ. ಅವುಗಳಲ್ಲಿ ಸಿಂಹಪಾಲು ಪರಿಸರ ಕುರಿತ ವರ್ಣಚಿತ್ರ ಗಳಿವೆ. ಗುಲ್ಬರ್ಗ, ಬೆಂಗಳೂರು, ದೆಹಲಿ ನಡೆದ ಚಿತ್ರಕಲಾ ಶಿಬಿರಗಳಲ್ಲಿ ತಮ್ಮ ಕಲಾಕೃತಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.ಸಾಂಪ್ರದಾಯಿಕ ಚಿತ್ರಕಲೆಯಲ್ಲಿ ಗುಲ್ಬರ್ಗಕ್ಕೆ ಉತ್ತಮ ಹೆಸರಿದೆ. ಯುವಕಲಾವಿದರನ್ನು ನಾಡಿಗೆ ನೀಡಿದ ಖ್ಯಾತಿ ಇಲ್ಲಿನ ಎಂಎಂಕೆ ಕಲಾ ಕಾಲೇಜಿಗೆ ಸಲ್ಲುತ್ತದೆ. ಈ ಕಾಲೇಜು ಹೈ.ಕ ಭಾಗದ ಕಲಾ ‘ಪ್ರತಿಭೆ’ಗಳ ‘ಮಹಾ’ಪೋಷಕ. ಇಲ್ಲಿ ಅಧ್ಯಯನ ಮಾಡಿದವರು ಬೆಂಗಳೂರು, ಮುಂಬೈ, ಹೈದಾರಾ ಬಾದ್‌ನಲ್ಲಿ ನೆಲೆ ಕಂಡುಕೊಂಡಿ ದ್ದಾರೆ. ರಾಜ್ಯ, ನೆರೆ ರಾಜ್ಯಗಳ ವಿದ್ಯಾರ್ಥಿ ಗಳು ಅಧ್ಯಯನ ಕ್ಕಾಗಿ ಇಲ್ಲಿಗೆ ಬರುತ್ತಾರೆ. ಅಷ್ಟರ ಮಟ್ಟಿಗೆ ಈ ಕಾಲೇಜು ಕೀರ್ತಿ ಸಂಪಾದಿಸಿದೆ. ಈ ಕಾಲೇಜಿನ ವಿದ್ಯಾರ್ಥಿನಿ ನೀಲಮ್ಮ ಸಹ ಉತ್ತಮ ಕಲಾವಿದೆ ಎಂಬುದಕ್ಕೆ ಅವರ ವರ್ಣಚಿತ್ರಗಳು ಸಾಕ್ಷಿ.ಗುಲ್ಬರ್ಗ ಸೇರಿದಂತೆ ದೆಹಲಿ, ಚಂಡೀಗಡ, ಬೆಂಗಳೂರು, ಬೀದರ್‌ ನಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಕಲಾ ಮಹೋತ್ಸವ ಚಿತ್ರಕಲಾ ಸ್ಪರ್ಧೆ (2008), ಗುಲ್ಬರ್ಗ ವಿ.ವಿ ಚಿತ್ರಕಲಾ ಸ್ಪರ್ಧೆ (2009), ಎಸ್.ಎಂ. ಪಂಡಿತ್ ಕಲಾಗ್ಯಾಲರಿ ಯಲ್ಲಿ ನಡೆದ ಪ್ರದರ್ಶನ (2012), ಮೈಸೂರಿನ ಚಾಮ ರಾಜೇಂದ್ರ ದೃಶ್ಯಕಲಾ ಅಕಾಡೆಮಿ ಸ್ಪರ್ಧೆ (2012), ಕ್ಯಾಮೆಲಿನ್ ಚಿತ್ರಕಲಾ ಪ್ರದರ್ಶನ (2013), ಗುಲ್ಬರ್ಗದ ಅಂಕುರ ಕಲಾ ಗ್ಯಾಲರಿ ಏರ್ಪಡಿಸಿದ್ದ ಸ್ಪರ್ಧೆ(2010ರಿಂದ ಸತತ ಮೂರು ವರ್ಷ)ಯಲ್ಲಿ ಭಾಗಿಯಾಗಿದ್ದಾರೆ.ಚಿತ್ರಕಲಾ ಕೌಶಲ ವೃದ್ಧಿಸುವ ವಿವಿಧ ಚಿತ್ರಕಲಾ ಶಿಬಿರಗಳಲ್ಲಿ ಪಾಲ್ಗೊಂಡಿ ದ್ದಾರೆ. ನಗರದಲ್ಲಿ ಹಮ್ಮಿಕೊಳ್ಳುವ ಭಿತ್ತಿಚಿತ್ರ ಶಿಬಿರದಲ್ಲಿ ಸತತ ಐದು ವರ್ಷಗಳಿಂದ ಹಾಜರಾಗುತ್ತಿದ್ದಾರೆ. ವುಡ್‌ಕ್ಯಾಂಪ್(2011), 2013ರ ಚೈನಾ ಶಿಬಿರಗಳಲ್ಲಿ ಸಕ್ರಿಯರಾಗಿ ಕೆಲಸ ನಿರ್ವಹಿಸಿದ್ದಾರೆ. ವರ್ಣಚಿತ್ರ ರಚನೆ ಜತೆಗೆ ತೋರಣಗಳ ಸಿದ್ಧತೆ, ಬ್ಯಾಗ್ ತಯಾರಿ, ಹೊಲಿಗೆ ಕೆಲಸದಲ್ಲೂ ತೊಡಗಿದ್ದಾರೆ. ಈ ಕುಸುರಿ ಕೆಲಸ ಹಾಗೂ ರಚಿಸಿದ ಕಲಾಕೃತಿಗಳ ಮಾರಾಟದಿಂದ ಬರುವ ಆದಾಯ ಓದಿಗೆ ನೆರವಾಗಿದೆ.ಇವರ ಕಲಾಪ್ರತಿಭೆ ಹಲವು ಪ್ರಶಸ್ತಿ, ನಗದು ಪುರಸ್ಕಾರ ಸಂದಿವೆ. 2010ರ ಗುಲ್ಬರ್ಗ ವಿ.ವಿ ಪ್ರಶಸ್ತಿ, 2012 ಮೈಸೂರು ದಸರಾ ಚಿತ್ರಕಲಾ ಪ್ರದರ್ಶನದ ಪ್ರಶಸ್ತಿ ಪ್ರಮುಖವಾಗಿವೆ. ಗೆಳತಿಯರ ಜತೆಗೂಡಿ ನಗರದಲ್ಲಿ ಹಲವು ಪ್ರದರ್ಶನ ಸಂಘಟಿಸಿದ್ದಾರೆ. ಮುಂದೆಯೂ ಚಿತ್ರಕಲಾ ಪ್ರದರ್ಶನ ಹಾಗೂ ಶಿಬಿರ ನಡೆಸುವ ಯೋಜನೆ ಹೊಂದಿದ್ದಾರೆ. ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸುವುದು ಅವರ ಕನಸು.‘ಆಸಕ್ತಿಯಿಂದಲೇ ಈ ಕ್ಷೇತ್ರವನ್ನು ಆಯ್ದುಕೊಂಡಿ ದ್ದೇನೆ. ಹಸಿರು, ಮರ–-ಗಿಡ ನನಗೆ ಪ್ರೇರಣೆ. ಮರಗಳ ರಚನೆ, ಪ್ರಾಣಿ, ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸುವುದು ಬಾಲ್ಯದಿಂದಲೇ ಬೆಳೆದ ಹವ್ಯಾಸ. ಹೀಗೆ ಗಮನಿಸಿದ ಅಂಶ ಗಳನ್ನು ದಾಖಲಿಸಲು ವರ್ಣಚಿತ್ರಕಲೆ ಸೂಕ್ತ ಮಾಧ್ಯಮ. ಮನೆಯಲ್ಲಿ ಅಣ್ಣ ಹಾಗೂ ಎಂಎಂಕೆ ಕಾಲೇಜಿನ ಪ್ರಾಂಶು ಪಾಲ ಡಾ.ವಿ.ಜಿ. ಅಂದಾನಿ ಅವರು ಮಾರ್ಗದರ್ಶನ ನೀಡಿದ್ದಾರೆ. ಪರಿಸರದ ಸೂಕ್ಷ್ಮಗಳನ್ನು ಇನ್ನಷ್ಟು ಅರ್ಥಪೂರ್ಣ ವಾಗಿ ಚಿತ್ರಿಸುವ ಹಂಬಲ ಇದೆ’ ಎನ್ನುತ್ತಾರೆ ನೀಲಮ್ಮಾ ಹೊಸಮನಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry