ಮಂಗಳವಾರ, ಮೇ 24, 2022
30 °C

ಕಾನೂನಿನ ಅರಿವು ಎಲ್ಲರಿಗೂ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಿಂಗಪುರ: ಎಲ್ಲರಿಗೂ ಕಾನೂನು ಅರಿವಿದ್ದರೆ ಅಪರಾಧಗಳು ಇರುವುದಿಲ್ಲ. ಶೇ 5ರಷ್ಟು ಜನರು ಮಾತ್ರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಅಪರಾಧಿಗಳಾಗುತ್ತಾರೆ. ಅಂತಹ ಅಪರಾಧಿಗಳ ಪತ್ತೆ ಮಾಡಲು ಸಾರ್ವಜನಿಕರು ನೀಡುವ ಮಾಹಿತಿ ಮತ್ತು ಸಾಕ್ಷಿಗಳನ್ನು ಅವಲಂಬಿಸಿದೆ ಎಂದು ಜಮಖಂಡಿಯ ಪೊಲೀಸ್ ಉಪವರಿಷ್ಠಾಧಿಕಾರಿ ರವಿ ನಾರಾಯಣ ಹೇಳಿದರು.ಅವರು ಇಲ್ಲಿಯ ಕೆ.ಎಲ್.ಇ ಎಸ್‌ಸಿಪಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ  “ಕಾನೂನು ಅರಿವು ಮತ್ತು ಲೋಕಾಯುಕ್ತದ ಮಹತ್ವ “ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿ ಬ್ರಿಟಿಷ್‌ರು ಹಾಕಿಕೊಟ್ಟ ಮಾರ್ಗದಲ್ಲಿಯೇ ಪೊಲೀಸ್ ಇಲಾಖೆ ಇನ್ನೂ ಮುಂದುವರಿದಿದೆ. ಸರಕಾರ ಫಿರ್ಯಾದಿ ನೀಡುವವರಿಗೆ ಹೊರೆಯಾಗಬಾರದೆಂದು ಫಿರ್ಯಾದಿ ಸಲ್ಲಿಸಲು, ತನಿಖೆ ಮಾಡಲು ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ. ಸಾಕ್ಷಿ ನೀಡಲು, ಮಾಹಿತಿ ನೀಡಲು ಜನ ಮುಂದೆ ಬರಬೇಕು. ಮತ್ತು ದೇಶದಲ್ಲಿ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. 2009 ರ ವರದಿಯ ಪ್ರಕಾರ ದೇಶದಲ್ಲಿ 4 ಲಕ್ಷ 5 ಸಾವಿರ ಜನ ಸಾವನ್ನಪ್ಪಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ ಅನಿಲಕುಮಾರ ಭೂಮರಡ್ಡಿ, ಭ್ರಷ್ಟಾಚಾರ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಅತಿ ಕೆಟ್ಟ, ವ್ಯಕ್ತಿಗಳ ಖರ್ಚು ಮತ್ತು ಆದಾಯಗಳ ವಿವರಗಳನ್ನು ಸರಳವಾಗಿ ಪಡೆಯಬಹುದು. ಆದರೆ ಅವರ ಆದಾಯದ ಮೂಲಗಳೆಷ್ಟು ಎನ್ನುವುದು ಗೊತ್ತಾಗುವುದಿಲ್ಲ. ಕಾನೂನಿನ ಪ್ರಕಾರ ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಗ್ರಹಿಸಿದ್ದರೆ ಅಂಥವರ ವಿವರಗಳನ್ನು ನಿಗದಿತ ಅರ್ಜಿ ನಮೂನೆಗಳಲ್ಲಿ ಸಾರ್ವಜನಿಕರು ಇಲಾಖೆ ಸಲ್ಲಿಸಿದರೆ ತನಿಖೆಗೆ ಅನುಕೂಲವಾಗುವುದು ಎಂದರು. ಕಾನಿಪ ಸಂಘದ ಅಧ್ಯಕ್ಷ ಸಂಗಮೇಶ ಕೋಟಿ ಮಾತನಾಡಿದರು. ಕೆ.ಎಲ್.ಇ ಸ್ಥಾನಿಕ ಸಮಿತಿ ಚೇರಮನ್  ಡಾ.ಎಸ್.ಎಂ. ಘಟ್ನಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪಿ.ಎಸ್. ಸಿಂಪಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ ಪ್ರೊ. ಎಲ್.ಬಿ. ತುಪ್ಪದ ವೇದಿಕೆಯಲ್ಲಿದ್ದರು. ಪ್ರಾ.ಎ.ಎಚ್. ಕೊಳಚಿ ಸ್ವಾಗತಿಸಿದರು. ಪ್ರೊ.ಕೆ.ಎಸ್. ಗುಡೋಡಗಿ ನಿರೂಪಿಸಿದರು. ದೇವೇಂದ್ರ ಬಿಸ್ವಾಗರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.