ಕಾನೂನುಬದ್ದವಾಗಿ ಹೆಸರು ಶಿಫಾರಸು ಮಾಡಿದೆ -ಚಂದ್ರಶೇಖರಯ್ಯ

7

ಕಾನೂನುಬದ್ದವಾಗಿ ಹೆಸರು ಶಿಫಾರಸು ಮಾಡಿದೆ -ಚಂದ್ರಶೇಖರಯ್ಯ

Published:
Updated:

ಬೆಂಗಳೂರು (ಪಿಟಿಐ): ಉಪ ಲೋಕಾಯುಕ್ತ ಸ್ಥಾನಕ್ಕೆ ನನ್ನ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವಾಗ ಮುಖ್ಯಮಂತ್ರಿಗಳು ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಸಂಬಂಧಪಟ್ಟವರ `ಅಗತ್ಯ ಸಲಹೆ~ ಪಡೆದು ಸೂಚಿಸಿದ್ದಾರೆ ಎಂದು ಉಪ ಲೋಕಾಯುಕ್ತ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಶನಿವಾರ ಹೇಳಿದರು.ರಾಜ್ಯಪಾಲರಿಗೆ ನನ್ನ ಹೆಸರನ್ನು ಶಿಫಾರಸು ಮಾಡುವ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನುಬಾಹಿರ ಕ್ರಮ, ಅಕ್ರಮಗಳನ್ನು ಮುಖ್ಯಮಂತ್ರಿಗಳು (ಡಿ.ವಿ.ಸದಾನಂದಗೌಡ) ಎಸಗಿಲ್ಲ ಎಂದು ಅವರು ತಿಳಿಸಿದರು.ಚಂದ್ರಶೇಖರಯ್ಯ ಅವರ ನೇಮಕಾತಿ ಕುರಿತಂತೆ  ಸರ್ಕಾರಕ್ಕೆ ಪತ್ರ ಬರೆದು ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು, ಮುಖ್ಯಮಂತ್ರಿಗಳು ಕರ್ನಾಟಕ ಲೋಕಾಯುಕ್ತ ಕಾಯ್ದೆಯನ್ನು ಉಲ್ಲಂಘಿಸಿ ಮಾಡಲಾದ ಚಂದ್ರಶೇಖರಯ್ಯ ಅವರ ನೇಮಕಾತಿ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry