ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

7

ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಮನವಿ

Published:
Updated:

ಕಾರವಾರ: ತಾಲ್ಲೂಕಿನ ಮದೇವಾಡಾದ ರಾಮನಾಥ ದೇವಸ್ಥಾನದ ಎದುರಿನ ಸರ್ಕಾರಿ ರಸ್ತೆಗೆ ಅಡ್ಡಲಾಗಿ ಆವರಣ ಗೋಡೆ ಕಟ್ಟುತ್ತಿರುವ ದೇವಸ್ಥಾನದ ಮೊಕ್ತೇಸರರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಸ್ನೋಟಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.ಗ್ರಾಮದ ಸರ್ವೆ ನಂ. 13ಎ/28 ರಲ್ಲಿರುವ ದೇವಸ್ಥಾನದ ಎರುರಿನಿಂದ ಸಾವಂತವಾಡಕ್ಕೆ ಹೋಗುವ ರಸ್ತೆಗೆ ದೇವಸ್ಥಾನದ ಮೊಕ್ತೇಸರ ಪ್ರಭಾಕರ ಸಾಳುಂಕೆ, ನಾರಾಯಣ ದೇಸಾಯಿ ಇವರು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ರಸ್ತೆ ಬಂದ ಮಾಡಲು ಹೊರಟಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ರಸ್ತೆ ದೇವಸ್ಥಾನದ ಜಮೀನಿನ ಮಧ್ಯದಿಂದಲೇ ಹಾದು ಹೋಗಿದೆ. ಆದರೆ ನ್ಯಾಯಾಲಯ ಈ ರಸ್ತೆಯನ್ನು ಯಾವುದೇ ಕಾರಣಕ್ಕೂ ಬಂದ ಮಾಡಬಾರದು ಎಂದು ಆದೇಶ ನೀಡಿದ್ದರು, ದೇವಸ್ಥಾನದ ಮುಕ್ತೇಸಾರರು ರಸ್ತೆ ಮೇಲೆ ಚೀರಿ ಕಲ್ಲುಗಳನ್ನು ಹಾಕಿ ರಸ್ತೆ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಸ್ನೋಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ನಾಯ್ಕ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry