ಶನಿವಾರ, ಮೇ 15, 2021
24 °C

ಕಾನೂನು ಗೌರವಿಸಿದರೆ ಸಮಾಜದಲ್ಲಿ ಶಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: `ಕಾನೂನಿನಡಿ ಎಲ್ಲರೂ ಸಮಾನರು. ಕಾನೂನನ್ನು ಗೌರವಿಸಬೇಕು. ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ~ ಎಂದು   ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಸಂತೋಷಕುಮಾರ ಶೆಟ್ಟಿ ತಿಳಿಸಿದರು.ಪಟ್ಟಣದ ವಿನಾಯಕ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ನಡೆದ `ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು~ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.`ತಪ್ಪು ಮಾಡಿದವರು ಖಂಡಿತ ಶಿಕ್ಷೆಗೆ ಗುರಿ ಎಂಬುದಕ್ಕೆ ಈಚೆಗೆ ಸಿಕ್ಕಿಬೀಳುತ್ತಿರುವ ಭ್ರಷ್ಟ ರಾಜಕಾರಣಿ ಮತ್ತು ಉದ್ಯಮಿ  ಸಾಕ್ಷಿ.  ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಕಾನೂನಿಗೆ ಶರಣಾಗಬೇಕಾಗುತ್ತದೆ~ ಎಂದು ತಿಳಿಸಿದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗಮಣಿ , ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲೇ ಕಾನೂನು ಅರಿತುಕೊಂಡರೆ ಭವಿಷ್ಯದಲ್ಲಿ ಉಪಯೋಗ ವಾಗುತ್ತದೆ ಎಂದರು.ವಕೀಲ ವಿಜಯರಾಘವ ಮಾತನಾಡಿ, ಬಾಲ ಕಾರ್ಮಿಕರು ಕಂಡು ಬಂದಲ್ಲಿ, ತಕ್ಷಣವೇ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.ವಕೀಲ ಶಾಮಶಂಕರ್‌ರಾವ್ `ಸಂಚಾರ ನಿಯಮ~ ಗಳ ಕುರಿತು ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಂ.ಎಸ್.ಆನಂದ್, ವಕೀಲರಾದ  ಗೋಪಾಲ್, ರಾಮಚಂದ್ರ ಸಂಸ್ಥೆಯ ಪ್ರಾಂಶುಪಾಲ ಮುರಳಿ ಉಪಸ್ಥಿತರಿದ್ದರು.ವಿದುರಾಶ್ವತ್ಥ ಕ್ಷೇತ್ರ ಅಭಿವೃದ್ದಿಗೆ ರೂ.96 ಲಕ್ಷ

ತಾಲ್ಲೂಕಿನ ವಿದುರಾಶ್ವತ್ಥ ಕ್ಷೇತ್ರದ ಅಭಿವೃದ್ಧಿ ಮತ್ತು ಮುಖ್ಯ ರಸ್ತೆ ವಿಸ್ತರಣೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ರೂ. 96 ಲಕ್ಷ ಮಂಜೂರಾಗಿದೆ.ಐತಿಹಾಸಿಕ ಮಹತ್ವ ಹೊಂದಿದ ವಿದುರಾಶ್ವತ್ಥ ಕ್ಷೇತ್ರಕ್ಕೆ ಪ್ರತಿ ದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಪ್ರವಾಸಿಗರ ಅನುಕೂಲದ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು.ಇದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಬಿಜೆಪಿ ವಕ್ತಾರ ಬಾಲಾಜಿ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿನಾರಾಯಣ ರೆಡ್ಡಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.