ಭಾನುವಾರ, ಏಪ್ರಿಲ್ 18, 2021
29 °C

ಕಾನೂನು ಜ್ಞಾನದಿಂದ ಜೀವನದಲ್ಲಿ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನೂನು ಜ್ಞಾನದಿಂದ ಜೀವನದಲ್ಲಿ ನೆಮ್ಮದಿ

ಶನಿವಾರಸಂತೆ: ಕಾನೂನಿನ ಜ್ಞಾನ ಇರುವ ವ್ಯಕ್ತಿ ಜೀವನದಲ್ಲಿ ನೆಮ್ಮದಿಯಾಗಿ ಬಾಳುತ್ತಾನೆ ಎಂದು ಸಿವಿಲ್ ನ್ಯಾಯಾಧೀಶ ಸಿ.ಎಸ್.ಜಿತೇಂದ್ರನಾಥ್ ಹೇಳಿದರು. ಇಲ್ಲಿಯ ಭಾರತಿ ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಬುಧವಾರ ನಡೆದ `ಕಾನೂನು ಅರಿವು ಕಾರ್ಯಕ್ರಮ~ ಉದ್ಘಾಟಿಸಿ ಅವರು ಮಾತನಾಡಿದರು.ಜ್ಞಾನವನ್ನು ಪಸರಿಸುವ ನಿಟ್ಟಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರಕೃತಿ ಕೊಟ್ಟಿರುವ ಹಕ್ಕುಗಳೇ ಸಹಜವಾದ ಹಕ್ಕುಗಳು. ಸಂವಿಧಾನ ಈ ಹಕ್ಕುಗಳನ್ನು ಖಚಿತಪಡಿಸುತ್ತದೆ ಎಂದರು.ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಬಿ.ವರದರಾಜ್ ಮಾತನಾಡಿ ಜ್ಞಾನಾರ್ಜನೆ ಮಾಡುವ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಕಾನೂನು ಅರಿವಿನ ಕೊರತೆಯಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಅನಕ್ಷರತೆಯಿಂದ ಮೂಢನಂಬಿಕೆ ಬೆಳೆದು ಕ್ರೌರ್ಯ ಹೆಚ್ಚುತ್ತಿದೆ ಎಂದರು.ವಕೀಲರದ ಕೆ.ಬಿ.ಮೋಹನ್ `ಗ್ರಾಹಕರ ಹಕ್ಕು~, ಡಿ.ಎ.ಕೃಷ್ಣಕುಮಾರ್ `ಮಹಿಳಾ ದೌರ್ಜನ್ಯ ತಡೆ ಕಾಯಿದೆ~, ಅಭಿಮನ್ಯುಕುಮಾರ್ `ಮಾನವ ಹಕ್ಕುಗಳು~, ಎಸ್.ವಿ.ಜಗದೀಶ್ `ವಾಹನ ಕಾಯ್ದೆ~ ಬಗ್ಗೆ ಉಪನ್ಯಾಸ ನೀಡಿದರು.ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಬಿ.ನಾಗಪ್ಪ, ಪ್ರಾಂಶುಪಾಲ ಎಸ್.ಎಂ.ಉಮಾಶಂಕರ್, ಎಂ.ಆರ್.ನಿರಂಜನ್ ಹಾಗೂ ಪಿಎಸ್‌ಐ ಮಹದೇವಯ್ಯ, ಉಪನ್ಯಾಸಕ ವೃಂದದವರು ಇದ್ದರು.

ಉಪನ್ಯಾಸಕಿ ಶಿಲ್ಪಾ ಸ್ವಾಗತಿಸಿದರು. ಉಪನ್ಯಾಸಕ ಮಹಾಂತೇಶ್ ಕಾರ್ಯಕ್ರಮ ನಿರೂಪಿಸಿದರು.

         

           

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.