ಕಾನೂನು ನೆರವು ಕೇಂದ್ರ ಆರಂಭ

ಮಂಗಳವಾರ, ಜೂಲೈ 16, 2019
25 °C

ಕಾನೂನು ನೆರವು ಕೇಂದ್ರ ಆರಂಭ

Published:
Updated:

ಹೊಸದುರ್ಗ: ಆರ್ಥಿಕವಾಗಿ ಹಿಂದುಳಿದ ಜನರ ನೆರವಿಗಾಗಿ ಕಾನೂನು ನೆರವು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಧೀಶೆ ಎಂ.ಎಸ್. ಶಶಿಕಲಾ ಹೇಳಿದರು.ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾನೂನು ನೆರವು ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.ಜನಸಾಮಾನ್ಯರು ಕಾನೂನು ಅರಿವಿಲ್ಲದೆ ತೊಂದರೆ ಗೊಳಗಾಗುವುದನ್ನು ತಪ್ಪಿಸಲು ತಾಲ್ಲೂಕು ಕಚೇರಿಯಲ್ಲಿ ಕಾನೂನು ನೆರವು ಕೇಂದ್ರ ಪ್ರತಿ ಸೋಮವಾರ ಹಾಗೂ ಬುಧವಾರ ಕಾರ್ಯನಿರ್ವಹಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಹಶೀಲ್ದಾರ್ ಎಂ.ಪಿ. ಮಾರುತಿ ಮಾತನಾಡಿದರು.ಸಹಾಯಕ ಸರ್ಕಾರಿ ಅಭಿಯೋಜಕ ಮಲ್ಲಯ್ಯ, ವಕೀಲರ ಸಂಘದ ಅಧ್ಯಕ್ಷ ಎ.ಎಲ್. ಬೊಮ್ಮಣ್ಣ, ಕಾರ್ಯದರ್ಶಿ ಡಿ. ನಿರಂಜನಮೂರ್ತಿ, ಹಿರಿಯ ವಕೀಲರಾದ ಡಿ.ವಿ. ಅಂಜನಕುಮಾರ್, ಎಚ್.ಆರ್. ಷಡಾಕ್ಷರಪ್ಪ, ಬಿ.ಜೆ. ಭರತ್, ಕಾನೂನು ಸಲಹೆಗಾರರಾದ ಎಚ್.ಎಸ್.  ರುಕ್ಮಿಣಿ, ಒ. ಮಂಜುನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry