ಕಾನೂನು ಪ್ರವೇಶ ಪರೀಕ್ಷೆ: ಆಶ್ವೀಜ್ ಪ್ರಥಮ ರ‌್ಯಾಂಕ್

7

ಕಾನೂನು ಪ್ರವೇಶ ಪರೀಕ್ಷೆ: ಆಶ್ವೀಜ್ ಪ್ರಥಮ ರ‌್ಯಾಂಕ್

Published:
Updated:

ದಾವಣಗೆರೆ: ದೇಶದಾದ್ಯಂತ ಈಚೆಗೆ ನಡೆದ ಕಾನೂನು ಪ್ರವೇಶ ಪರೀಕ್ಷೆಯಲ್ಲಿ ನಗರದ ವೈಷ್ಣವಿ ಚೇತನಾ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿ ಆಶ್ವೀಜ್ ಎಸ್. ರಾಮಯ್ಯ ಅವರು ಪ್ರಥಮ ರ‌್ಯಾಂಕ್ ಗಳಿಸಿದ್ದಾರೆ.ಅವರು ಎಸ್‌ಎಸ್ ಬಡಾವಣೆಯ ಸಿವಿಲ್ ಎಂಜಿನಿಯರ್ ಆರ್. ಸುರೇಶ್-ಶೀಲಾ ದಂಪತಿ ಪುತ್ರ. ~ಐಎಎಸ್ ಕನಸು ಹೊತ್ತು ಐದು ವರ್ಷಗಳ ಕಾನೂನು ಪದವಿ ಸೇರಲು ನಿರ್ಧರಿಸಿದೆ. ದೆಹಲಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದು, ಅಲ್ಲೇ ಐಎಎಸ್ ತರಬೇತಿ ಪಡೆಯುವೆ~ ಎನ್ನುತ್ತಾರೆ ಆಶ್ವೀಜ್.ಅವರನ್ನು ಚೇತನಾ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮೀ ವೀರಮಾಚನೇನಿ, ಪ್ರಾಂಶುಪಾಲ ಪ್ರೊ.ಬಿ.ವಿ. ರಮಣಕುಮಾರ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry