ಕಾನೂನು ವಿವಿಗೆ ಹೊಸ ಕುಲಪತಿ

7

ಕಾನೂನು ವಿವಿಗೆ ಹೊಸ ಕುಲಪತಿ

Published:
Updated:
ಕಾನೂನು ವಿವಿಗೆ ಹೊಸ ಕುಲಪತಿ

ಬೆಂಗಳೂರು/ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ. ಟಿ.ಆರ್. ಸುಬ್ರಹ್ಮಣ್ಯ ಅವರನ್ನು ನೇಮಕ ಮಾಡಲಾಗಿದೆ. ಅವರ ಅಧಿಕಾರ ಅವಧಿ ನಾಲ್ಕು ವರ್ಷಗಳು.ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ಸುಬ್ರಹ್ಮಣ್ಯ ಎಂ.ಎ, ಎಲ್‌ಎಲ್‌ಎಂ ಪದವಿ ಜೊತೆಗೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.ಅಂತರರಾಷ್ಟ್ರೀಯ ಹಾಗೂ ಪರಿಸರ ಸಂಬಂಧಿ ಕಾನೂನು ವಿಷಯದಲ್ಲಿ ಪರಿಣತಿ ಹೊಂದಿದ್ದಾರೆ. ಬೆಂಗಳೂರು ವಿವಿ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವಿ.ವಿ ಕುಲಸಚಿವರಾಗಿಯೂ ಕೆಲ ಕಾಲ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಪಶ್ಚಿಮ ಬಂಗಾಳದ ಕಾನೂನು ವಿ.ವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.ಕಳೆದ ತಿಂಗಳ 11ರಂದು ಡಾ. ಜೆ.ಎಸ್. ಪಾಟೀಲ ಅವರ ನಿವೃತ್ತಿಯಿಂದಾಗಿ ಕಾನೂನು ವಿವಿ ಕುಲಪತಿ ಹುದ್ದೆ ತೆರವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry