ಕಾನೂನು ಸಲಹಾ ಕೇಂದ್ರ ಆರಂಭ

ಭಾನುವಾರ, ಜೂಲೈ 21, 2019
21 °C

ಕಾನೂನು ಸಲಹಾ ಕೇಂದ್ರ ಆರಂಭ

Published:
Updated:

ಕಡೂರು:  ತಾಲ್ಲೂಕು ಕಚೇರಿ ಆವರಣದಲ್ಲಿ ಉಚಿತ ಕಾನೂನು ಸೇವಾ ಕೇಂದ್ರವನ್ನು ಸಿವಿಲ್ ನ್ಯಾಯಾಧೀಶ ಎಸ್.ಸುರೇಶ್  ಅವರು ಶುಕ್ರವಾರ ಉದ್ಘಾಟಿಸಿದರು.ಕೇಂದ್ರದಲ್ಲಿ ಪ್ರತಿ ಸೋಮವಾರ ಮತ್ತು ಶುಕ್ರವಾರ ಸಾರ್ವಜನಿಕರಿಗೆ ಉಚಿತ ಕಾನೂನು ನೆರವು ನೀಡಲಾಗುವುದು. ವಾರಕ್ಕೆ ಎರಡು ದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಮತ್ತು ಮಧ್ಯಾಹ್ನ 2ರಿಂದ 6 ಗಂಟೆವರೆಗೆ ವಕೀಲರು ಉಚಿತವಾಗಿ ಸಲಹೆ ನೀಡುವರು ಎಂದರು.ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ, ಬಡತನದಲ್ಲಿರುವವರಿಗೆ ಈ ಕೇಂದ್ರದಲ್ಲಿ ಅಗತ್ಯ ಮಾರ್ಗದರ್ಶನವನ್ನೂ ನೀಡಲಾಗುವುದು ಎಂದು ವಕೀಲ ಶೇಖರ್ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಬಿ.ಆರ್ ರೂಪ ಅವರು ಮಾತನಾಡಿದರು.

ಹಿರಿಯ ವಕೀಲ ಬೊಮ್ಮಣ್ಣ, ರೇಷ್ಮಾ, ಗೋವಿಂದ ಸ್ವಾಮಿ, ಶ್ರೀನಿವಾಸ್ ಸೂರಿ, ಕಂದಾಯ ಇಲಾಖೆ ಮತ್ತಿತರ ಇಲಾಖೆ ಅಧಿಕಾರಿಗಳು, ವಕೀಲರು, ಸಾರ್ವಜನಿಕರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry