ಶುಕ್ರವಾರ, ಮೇ 14, 2021
27 °C

ಕಾನೂನು ಸಾಕ್ಷರತಾ ರಥದಲ್ಲಿ 7 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ವಿರಾಜಪೇಟೆಗೆ ಶನಿವಾರ ಆಗಮಿಸಿದ ಕಾನೂನು ಸಾಕ್ಷರತಾ ರಥದಲ್ಲಿ ಹಮ್ಮಿಕೊಳ್ಳಲಾದ ಲೋಕ ಅದಾಲತ್‌ನಲ್ಲಿ ರಾಜಿ ಮೂಲಕ 7 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡಿವೆ.ವಿರಾಜಪೇಟೆ ಸಮುಚ್ಚಯ ನ್ಯಾಯಾಲಯಕ್ಕೆ ಮಡಿಕೇರಿಯಿಂದ ಬೆಳಿಗ್ಗೆ ಆಗಮಿಸಿದ `ಕಾನೂನು ಸಾಕ್ಷರತಾ ರಥ~ಕ್ಕೆ ಸಮುಚ್ಚಯ ನ್ಯಾಯಾಲಯಗಳ ಸಿವಿಲ್ ನ್ಯಾಯಾಧೀಶೆ ಕೃಷ್ಣಾ ತಾರಿಮನೆ ಹಸಿರು ನಿಶಾನೆ ತೋರಿ ಸ್ವಾಗತಿಸಿದರು. ನ್ಯಾಯಾಧೀಶ ಕೆಂಪರಾಜು ಅವರ ಸಮ್ಮುಖದಲ್ಲಿ ಲೋಕ ಅದಾಲತ್ ನಡೆಯಿತು.ನ್ಯಾಯಾಧೀಶೆ ಕೃಷ್ಣಾ ತಾರಿಮನೆ ಮಾತನಾಡಿ ಕಾನೂನು ಸೇವಾ ಪ್ರಾಧಿಕಾರ ರಚಿಸಿರುವ ಲೋಕ ಅದಾಲತ್‌ನಲ್ಲಿ ಎರಡೂ ಕಡೆಯವರು ಅಪೇಕ್ಷಿಸಿದರೆ ವಿಳಂಬವಿಲ್ಲದೇ ನ್ಯಾಯ ದೊರೆಯುತ್ತದೆ. ನ್ಯಾಯಾಲಯಕ್ಕೆ ಅಲೆದಾಡುವುದು, ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ. ನ್ಯಾಯಾಲಯಗಳಲ್ಲಿ ಕಡತಗಳ ಹೊರೆಯೂ ಕಡಿಮೆಯಾಗುತ್ತದೆ ಎಂದು ಹೇಳಿದರು.ಸಂಧಾನಕಾರರಾಗಿ ಹಿರಿಯ ವಕೀಲ ಎಂ.ಕೆ.ಪೂವಯ್ಯ ಹಾಗೂ ವಕೀಲ ಎಂ.ಎಸ್.ವೆಂಕಟೇಶ್ ಭಾಗವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಎನ್.ಕೆ.ದಿನೇಶ್, ದಿಲೀಪ್, ಜಗದೀಶ್, ಅನ್ವರ್ ಅಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.ವಿರಾಜಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಮಹಿಳೋದಯ ಮಹಿಳಾ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಲೋಕ ಅದಾಲತ್ ಸಾರ್ವಜನಿಕರಿಗಾಗಿ ಬುಧವಾರದವರೆಗೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.