ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ

7

ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ

Published:
Updated:

ಶ್ರೀನಿವಾಸಪುರ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥಯಾತ್ರೆ ಕೈಗೊಳ್ಳಲಾಗಿದೆ. ಜನರು ಅದರ ಪೂರ್ಣ ಪ್ರಯೋಜನ ಪಡೆದುಕೊಳ್ಳ ಬೇಕು ಎಂದು ಸ್ಥಳೀಯ ನ್ಯಾಯಾ ಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ರಾದ ಪ್ರೀತ್‌ಜೆ ಮನವಿ ಮಾಡಿದರು.ಪಟ್ಟಣದ ನ್ಯಾಯಾಲಯದ ಎದುರು ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ಕಾನೂನು ಸಾಕ್ಷರತಾ ರಥ ಪಟ್ಟಣದ ಎಸ್‌ಎಫ್‌ಎಸ್ ಪ್ರೌಢಶಾಲೆ, ಗೌನಿಪಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೈರಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಪ್ರವಾಸ ಕೈಗೊಂಡು ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕ ಟೇಶ್, ಶಿಕ್ಷಣ ಇಲಾಖೆ ಇಸಿಒ ಜಿ.ಶಂಕರ್, ಸಿಡಿಪಿಒ ಪದ್ಮನಾಭ್, ಬಿಇಒ ಎಚ್.ಮಹಮದ್ ಖಲೀಲ್ ಭಾಗವಹಿಸಿದ್ದರು.ವಕೀಲರಾದ ಜಿ.ಆರ್.ರಮೇಶ್, ಕೆ.ಶಿವಪ್ಪ, ಮುರಳಿ ಮೋಹನ್‌ರೆಡ್ಡಿ ಭಾಷಣದ ಮೂಲಕ ಕಾನೂನು ಅರಿವು ಮೂಡಿಸಿದರು. ಶ್ರೀನಿವಾಸರೆಡ್ಡಿ ಮತ್ತಿ ತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry