ಕಾನ್ವೆಂಟ್ ಕಂದ

7

ಕಾನ್ವೆಂಟ್ ಕಂದ

Published:
Updated:

ಚಂದಪದ್ಯ

ಅಮ್ಮಾ... ಅಮ್ಮಾ... ಕೇಳಮ್ಮಾ

ಸ್ಕೂಲು ಬ್ಯಾಗು ಭಾರವಮ್ಮಾ

ಬೆನ್ನು ತುಂಬಾ ನೋವಮ್ಮಾ

ಓಡಲು ಆಗದು ಕಾಣಮ್ಮಾ

ಹೆಚ್ಚಿನ ಹೋಂವರ್ಕ್ ಮಾಡಲು ಆಗದು

ಕೈಯು ತುಂಬಾ ನೋವಮ್ಮಾ

ಕಂ... ಐ... ಸೇ... ಕಣ್ಣು ಬಿಟ್ಟು

ಗದರುತ್ತಾರೆ ಮಿಸ್ಸಮ್ಮಾ

ಇಂಗ್ಲೀಷಲ್ಲಿ ಆಪಲ್ ಅಂದ್ರೆ

ಸೇಬು ಹಣ್ಣಮ್ಮಾ

ಬನಾನ ಅಂದೆ ಸಿಹಿಸಿಹಿಯಾದ

ಬಾಳೆಹಣ್ಣಮ್ಮಾ

ಇಂಗ್ಲೀಷ್‌ನಲ್ಲೆ ಇವುಗಳ್ನೆಲ್ಲಾ

ಕಲಿಯಬೇಕು ಯಾಕಮ್ಮಾ

ಕನ್ನಡದಲ್ಲಿ ಹೇಳಿದ್ರುನೂ

ಹಣ್ಣೇ ಅಲ್ವೇನಮ್ಮಾ

ಫ್ಲವರ್ ಮೇಲೆ ಬಟರ್‌ಫ್ಲೈ

ತುಂಬಾ ಬ್ಯೂಟಿಫುಲ್ ಅಮ್ಮಾ

ಅರಳುವ ಹೂವಿನ ಘಮಘಮ

ವಾಸನೆ ಅಮ್ಮನ ಭಾಷೆ ಕಾಣಮ್ಮಾ

`ಅಮ್ಮಾ~ ಅಂದರೆ ಎದೆಯ ಒಳಗೆ

ಪ್ರೀತಿ ಹರಿವುದು ಕಾಣಮ್ಮಾ

`ಮಮ್ಮಿ~ ಅಂದ್ರೆ ಮನಸಿನ

ಒಳಗೆ ತುಂಬಾ ಕಿರಿಕಿರಿ ಕಾಣಮ್ಮಾ

ಹುಟ್ಟಿದ ಕೂಡಲೆ ಆಡುವ ಮಾತು

`ಅಮ್ಮಾ~ ಅಂತೆ ಅಲ್ವೇನಮ್ಮಾ

ಸುಲಭದಿ ಪಾಠವ ಕಲಿಯಲು ನಮಗೆ

ಅಮ್ಮನ ಭಾಷೆಯೇ ಬೇಕು ಕಾಣಮ್ಮಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry