ಸೋಮವಾರ, ಮಾರ್ಚ್ 8, 2021
22 °C
ಕೆಲಸ ಕೊಡಿಸುವುದಾಗಿ ವಂಚನೆ; ಬಿಹಾರ ಮೂಲದ ಯುವಕನ ಬಂಧನ

ಕಾನ್‌ಸ್ಟೆಬಲ್‌ ಪುತ್ರನನ್ನೇ ಯಾಮಾರಿಸಿದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನ್‌ಸ್ಟೆಬಲ್‌ ಪುತ್ರನನ್ನೇ ಯಾಮಾರಿಸಿದ್ದ!

ಬೆಂಗಳೂರು: ಕೆಲಸ ಕೊಡಿಸುವುದಾಗಿ ಸೇವಾ ಶುಲ್ಕ ಪಡೆದು ಉದ್ಯೋಗ ಆಕಾಂಕ್ಷಿಗಳನ್ನು ವಂಚಿಸುತ್ತಿದ್ದ ಆರೋಪದಡಿ ಬಿಹಾರ ಮೂಲದ ಪ್ರೇಮ್‌ಚಂದ್‌ ಕುಮಾರ್‌ (20) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.‘ವಿದ್ಯಾರ್ಥಿ ಎಂದು ಹೇಳಿಕೊಂಡು ನಗರಕ್ಕೆ ಬಂದಿದ್ದ ಕುಮಾರ್, ವಿದ್ಯಾರಣ್ಯಪುರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಆತನಿಂದ  5 ಮೊಬೈಲ್‌, 2 ಲ್ಯಾಪ್‌ಟಾಪ್‌, 7 ಸಿಮ್‌ ಕಾರ್ಡ್‌,5 ಡೆಬಿಟ್ ಕಾರ್ಡ್‌ ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.‘ಬಹುರಾಷ್ಟ್ರೀಯ ಕಂಪೆ ನಿಗಳಲ್ಲಿ ಕೆಲಸ ಖಾಲಿ ಇದೆ ಎಂದು  ಹೇಳಿ ಆರೋಪಿಯು ದಿನಪತ್ರಿಕೆ ಮತ್ತು ಜಾಲತಾಣಗಳಲ್ಲಿ ಜಾಹೀರಾತು ನೀಡುತ್ತಿದ್ದ. ಅದರಲ್ಲಿದ್ದ ಮೊಬೈಲ್‌ ನಂಬರ್‌ ಮೂಲಕ ಆಕಾಂಕ್ಷಿಗಳು ಆತನನ್ನು ಸಂಪರ್ಕಿಸುತ್ತಿದ್ದರು’.‘ಖಾಲಿ ಇರುವ ಉದ್ಯೋಗ ಕೊಡಿಸಲು ಸೇವಾ ಶುಲ್ಕ ಭರಿಸಬೇಕು ಎನ್ನುತ್ತಿದ್ದ ಆರೋಪಿಯು ಆಕಾಂಕ್ಷಿ ಗಳಿಂದ ₹3 ಸಾವಿರದಿಂದ ₹10 ಸಾವಿರವರೆಗೆ ಹಣ ಪಡೆಯುತ್ತಿದ್ದ.  ಕೆಲಸ ಸಿಗುವ ನಿರೀಕ್ಷೆಯಲ್ಲಿ ಆಕಾಂಕ್ಷಿಗಳು, ಆತನ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುತ್ತಿದ್ದರು. ಕೆಲ ದಿನಗಳಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಆತ ನಾಪತ್ತೆಯಾಗುತ್ತಿದ್ದ’.‘ಎಡಿಜಿಪಿ ದರ್ಜೆಯ ಅಧಿಕಾರಿಯೊ ಬ್ಬರ ಬಳಿ ಸೇವೆ ಸಲ್ಲಿಸುತ್ತಿರುವ ಕಾನ್‌ಸ್ಟೆಬಲೊಬ್ಬರ ಪುತ್ರ, ಆರೋಪಿ ಯನ್ನು ಸಂಪರ್ಕಿಸಿದ್ದ.

ಆಗ ಆತನಿಂದ ₹5 ಸಾವಿರ ಸೇವಾ ಶುಲ್ಕ ಪಡೆದು ಪರಾರಿಯಾಗಿದ್ದ’ ಎಂದರು.

*

ಅಪರಿಚಿತರ ಹೆಸರಿನಲ್ಲಿ ಸಿಮ್‌ ಖರೀದಿ

‘ಬಿಹಾರದ ಅಪರಿಚಿತರ ವ್ಯಕ್ತಿಗಳ ದಾಖಲೆಗಳನ್ನು ಬಳಸಿ ಕೊಂಡು ಆರೋಪಿಯು ಸಿಮ್‌ ಖರೀದಿಸಿದ್ದ’ ಎಂದು ತನಿಖಾಧಿಕಾರಿ ತಿಳಿಸಿದರು.

‘ಮೊಬೈಲ್‌ ನಂಬರ್‌ ಮೂಲಕ ಆರೋಪಿ ಪತ್ತೆಗೆ ಮುಂದಾದಾಗ ನಕಲಿ ದಾಖಲೆ ಬಳಸಿಕೊಂಡಿದ್ದು ಗೊತ್ತಾಯಿತು’  ಎಂದು ಅವರು ಹೇಳಿದ್ದಾರೆ. ಬಿಹಾರ ರಾಜ್ಯದ ವಿವಿಧ ಕಡೆಗಳಲ್ಲಿರುವ  ಕೆಲ ವ್ಯಕ್ತಿಗಳಿಂದ ಮಾಹಿತಿ ಪಡೆದು ವಿದ್ಯಾರಣ್ಯಪುರದಲ್ಲಿ ಆರೋಪಿ ಯನ್ನು ಬಂಧಿಸಲಾಯಿತು. ಆತ ನೊಂದಿಗೆ ಸಂಪರ್ಕದಲ್ಲಿದ್ದ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು  ಮಾಹಿತಿ ನೀಡಿದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.