ಕಾನ್‌ಸ್ಟೆಬಲ್ ಸಾವು

ಸೋಮವಾರ, ಜೂಲೈ 22, 2019
26 °C

ಕಾನ್‌ಸ್ಟೆಬಲ್ ಸಾವು

Published:
Updated:

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಎಆರ್) ಹೆಡ್ ಕಾನ್‌ಸ್ಟೆಬಲ್ ಎಂ.ನಾಗರಾಜ್ (51) ಎಂಬುವರು ಸಾವನ್ನಪ್ಪಿರುವ ಘಟನೆ ಚಂದ್ರಲೇ ಔಟ್ ಸಮೀಪದ ಕಲ್ಯಾಣನಗರದಲ್ಲಿ ಭಾನುವಾರ ನಡೆದಿದೆ.ಮೂಲತಃ ಮಾಗಡಿಯವರಾದ ನಾಗರಾಜ್, ಪತ್ನಿ ಗಂಗಲಕ್ಷ್ಮಮ್ಮ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದ ಮೈಸೂರು ರಸ್ತೆಯಲ್ಲಿರುವ ಸಿಎಆರ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದರು. ಅವರು, ನಾಗರಬಾವಿ ಸಮೀಪದ ಮೂಡಲ ಪಾಳ್ಯದಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸುತ್ತಿದ್ದಾರೆ. ಭಾನುವಾರ ಮಗ ಪುನೀತ್‌ನನ್ನು ಕರೆದುಕೊಂಡು ಮನೆ ವೀಕ್ಷಿಸಲು ಹೋಗಿದ್ದರು.ಮೂರನೇ ಮಹಡಿಯಲ್ಲಿ ನೀರಿನ ಟ್ಯಾಂಕ್ ಇಡಲು ಬಿಡಲಾಗಿದ್ದ ಜಾಗ ನೋಡುವ ಸಲುವಾಗಿ ನಾಗರಾಜ್, ಏಣಿ ಮೂಲಕ ಹತ್ತಿದವರು ಕೆಳಗೆ ಬಿದ್ದಿದ್ದಾರೆ. ಮಗ ಪುನೀತ್, ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry