ಕಾಪು: ನೆಮ್ಮದಿ ಕೇಂದ್ರ ಬಂದ್- ಜನರ ಆಕ್ರೋಶ

7

ಕಾಪು: ನೆಮ್ಮದಿ ಕೇಂದ್ರ ಬಂದ್- ಜನರ ಆಕ್ರೋಶ

Published:
Updated:

ಕಾಪು (ಪಡುಬಿದ್ರಿ): ನೆಮ್ಮದಿ ಕೇಂದ್ರದ ಸಿಬ್ಬಂದಿ ಮುಷ್ಕರದಿಂದಾಗಿ ಮಂಗಳವಾರ ನೆಮ್ಮದಿ ಕೇಂದ್ರ ಬಂದ್ ಆಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.ಯಾವುದೇ ಪೂರ್ವ ಮಾಹಿತಿ ಇಲ್ಲದೆ ಕಾಪು ನೆಮ್ಮದಿ ಕೇಂದ್ರಕ್ಕೆ ಬಂದ ಹಲವರು ಕೇಂದ್ರದ ವಿರುದ್ಧ ಹಿಡಿಶಾಪ ಹಾಕಿದರು. ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಾದ ಜಾತಿ ಆದಾಯ ಪತ್ರಕ್ಕಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಅಲ್ಲದೆ ಕೇಂದ್ರದಿಂದ ಆಗಬೇಕಾದ ವಿವಿಧ ಕೆಲಸಗಳಿಗೆ ಅರ್ಜಿ ಹಿಡಿದುಕೊಂಡು ಬಂದ ಜನರು ಆಕ್ರೋಶ ವ್ಯಕ್ತಪಡಿಸಿ ಮರಳಿದರು.ನೆಮ್ಮದಿ ಕೇಂದ್ರದಲ್ಲಿ `ದಯವಿಟ್ಟು ನೆಮ್ಮದಿ ಕೇಂದ್ರದ ಎಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಸಹಕರಿಸಬೇಕು~ ಪತ್ರವೊಂದನ್ನು ಅಂಟಿಸಲಾಗಿದೆ.ಕೇಂದ್ರದ ಸಿಬ್ಬಂದಿಯ ದಿಢೀರ್ ಮುಷ್ಕರದಿಂದ ದೂರದಿಂದ ಬಂದ ಹಲವಾರು ಮಂದಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry