ಕಾಪು: ಬೀಚ್ ಸ್ವಚ್ಛತೆಗೆ ಉತ್ಸಾಹ

7

ಕಾಪು: ಬೀಚ್ ಸ್ವಚ್ಛತೆಗೆ ಉತ್ಸಾಹ

Published:
Updated:

ಕಾಪು (ಪಡುಬಿದ್ರಿ): ಕಾಪು ಪಡು ಬೀಚ್ ಫ್ರೆಂಡ್ಸ್ ನೇತೃತ್ವದಲ್ಲಿ ಕಾಪು ಬೀಚ್ ಉತ್ಸವ ಸಮಿತಿ ಮತ್ತು ಪರಿಸರದ ವಿವಿಧ ಸಂಘ, ಸಂಸ್ಥೆಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕಾಪು ಬೀಚ್ ಸ್ವಚ್ಛತಾ ಕಾರ್ಯಕ್ರಮ ಮಂಗಳವಾರ ನಡೆಯಿತು.ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಎಂ.ಆರ್.ಪ್ರಕಾಶ್ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಪು ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದ್ದರು.ಡಾ.ವಿಜಯೇಂದ್ರ, ಕಾಪು ಗ್ರಾ.ಪಂ. ಅಧ್ಯಕ್ಷ ಯೋಗೀಶ್ ರೈ, ತಾ.ಪಂ. ಸದಸ್ಯೆ ಶಾಂಭವಿ ಕುಲಾಲ್, ಬೀಚ್ ಉತ್ಸವ ಸಮಕಿತಿಯ ಶೇಖರ್ ಸಾಲ್ಯಾನ್, ಮೋಹನ್ ಬಂಗೇರಾ, ಪ್ರಭಾಕರ ಪೂಜಾರಿ, ಕಾಪು ಗ್ರಾ.ಪಂ. ಪಿಡಿಒ ಸುಂದರ ಪ್ರಭು, ಬೀಚ್ ಉತ್ಸವ ಸಮಿತಿಯ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬೀಚ್ ಫ್ರೆಂಡ್ಸ್ ಸದಸ್ಯರೊಂದಿಗೆ ಕಾಪು ಗ್ರಾ.ಪಂ. ಮಹಾದೇವಿ ಪ್ರೌಢಶಾಲೆ, ಕಾಪು ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆ, ದಂಡತೀರ್ಥ ಕಾಲೇಜಿನ ಯುವರೆಡ್ ಕ್ರಾಸ್ ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪೊಲಿಪು ಫ್ರೈಮರಿ ಶಾಲೆ, ಕಾಪು ಪಡು ಪ್ರೈಮರಿ ಶಾಲೆಯ ವಿದ್ಯಾರ್ಥಿಗಳು, ಮೊಗವೀರ ಮಹಿಳಾ ಮಂಡಳಿ, ಧೂಮಾವತಿ ಮಹಿಳಾ ಮಂಡಳಿ, ಸರ್ಕಲ್ ಫ್ರೆಂಡ್ಸ್ ಪೊಲಿಪು, ವೀರ ಆಂಜನೇಯ ವ್ಯಾಯಾಮ ಶಾಲೆ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸದಸ್ಯರು ಕೈಜೋಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry