ಮಂಗಳವಾರ, ನವೆಂಬರ್ 12, 2019
20 °C

ಕಾಪು: ರಾಜೀವ ಭವನ ಭಣ ಭಣ

Published:
Updated:
ಕಾಪು: ರಾಜೀವ ಭವನ ಭಣ ಭಣ

ಕಾಪು (ಪಡುಬಿದ್ರಿ): ಕಾಂಗ್ರೆಸ್ ಕಾರ್ಯಕರ್ತರಿಂದ ತುಂಬಿ ತುಳುಕುತಿದ್ದ ಕಾಪುವಿನ ರಾಜೀವ್ ಭವನಕ್ಕೆ ಬುಧವಾರ ಬೀಗ ಹಾಕಲಾಗಿದೆ.ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿನಯಕುಮಾರ್ ಸೊರಕೆ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ನಡೆದ ಭಿನ್ನಮತದಿಂದ ಮಾಜಿ ಸಚಿವ ವಸಂತ ಸಾಲ್ಯಾನ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.  ಸಾಲ್ಯಾನ್ ಸಚಿವರಾಗಿದ್ದ ಸಂದರ್ಭದಲ್ಲಿ ರಾಜೀವ್ ಭವನವನ್ನು ನಿರ್ಮಿಸಲಾಗಿತ್ತು. ಬಳಿಕ ಇದುವರೆಗೂ ಕಾಂಗ್ರೆಸ್‌ನ ಎಲ್ಲಾ ಸಭೆ ಸಮಾರಂಭಗಳು ಇಲ್ಲಿಯೇ ನಡೆಯುತ್ತಿತ್ತು. ಆದರೆ ಇದೀಗ ಸಾಲ್ಯಾನ್ ಇಲ್ಲದ ಕಾಂಗ್ರೆಸ್‌ನ ರಾಜೀವ್ ಭವನದಲ್ಲಿ ಕಾರ್ಯಕರ್ತರೇ ಇಲ್ಲದೆ ಭಣಗುಟ್ಟುತಿತ್ತು. ಸೊರಕೆ ಅವರು ಕಾಪುವಿನ ರಾಜೀವ್ ಭವನದಿಂದ ಮೆರವಣಿಗೆ ಹೊರಟು ನಾಮಪತ್ರ ಸಲ್ಲಿಸುವ ಮುನ್ಸೂಚನೆ ದೊರೆತು ಪತ್ರಕರ್ತರು ಅಲ್ಲಿಗೆ ತೆರಳಿದರೆ ಅಲ್ಲಿ ಬೀಗ ಜಡಿಯಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿಯೇ ಪ್ರಶ್ನಿಸಿದರೆ ನಾಮಪತ್ರ ಸಲ್ಲಿಸಲು ಎಲ್ಲಿಂದ ತೆರಳಲಿದ್ದಾರೆ ಎಂಬ ಮಾಹಿತಿ ಇಲ್ಲ.ಸಾಲ್ಯಾನರು ಪ್ರತಿ ಬಾರಿ ನಾಮ ಪತ್ರಸಲ್ಲಿಸಲು ರಾಜೀವ ಭವನದಿಂದ ಮೆರವಣಿಗೆಯಲ್ಲಿ ಸಾಗುವುದು ಸಂಪ್ರದಾಯವನ್ನಾಗಿಸಿದ್ದರು.ಜೆಡಿಎಸ್‌ನಲ್ಲಿ ಹಬ್ಬದ ವಾತಾವರಣ: ಇದೇ ವೇಳೆ ಕಾಪು ಪೇಟೆಯಲ್ಲಿ ಇರುವ ಜೆಡಿಎಸ್ ಕಚೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು. ಕಚೇರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಜೆಡಿಎಸ್ ಕಾರ್ಯಕರ್ತರು ಹಾಗೂ ಸಾಲ್ಯಾನ್ ಬೆಂಗಲಿಗರಿಂದ ತುಂಬಿ ತುಳುಕುತಿತ್ತು.

ಪ್ರತಿಕ್ರಿಯಿಸಿ (+)