ಕಾಫಿಗೂ ಪ್ರೀಪೇಡ್...

7

ಕಾಫಿಗೂ ಪ್ರೀಪೇಡ್...

Published:
Updated:

`ಎ ಲಾಟ್ ಕ್ಯಾನ್ ಹ್ಯಾಪೆನ್ ಓವರ್ ಎ ಕಪ್ ಆಫ್ ಕಾಫಿ~ (ಒಂದು ಲೋಟ ಕಾಫಿ ಏನೆಲ್ಲಕ್ಕೆ ನೆಪವಾಗಬಲ್ಲದು) ಎಂಬ ಸ್ಲೋಗನ್‌ಗೆ ಪದೇಪದೇ ಹೊಸ ಅರ್ಥ ಸಿಗುತ್ತಲೇ ಇದೆ. ಪ್ರೇಮಿಗಳ ತಾಣ, ಸ್ನೇಹಿತರ ಅಡ್ಡ, ಉದ್ಯಮಿಗಳ ಮೀಟಿಂಗ್ ಪಾಯಿಂಟ್, ಹೀಗೆ ಹತ್ತು ಹಲವು ಕಾರಣಗಳಿಗೆ ಕಾಫಿ ಡೇ ಈಗ ಹೇಳಿಮಾಡಿಸಿದ ಜಾಗವಾಗಿದೆ. ಸಂಜೆ ಹೊತ್ತು ಇಲ್ಲಿ ಕೂತು ಕಾಫಿ ಹೀರುತ್ತ ಹರಟೆ ಹೊಡೆಯುವುದು ಇತರೆ ಕಾಫಿ ಶಾಪ್‌ಗಳ ಹುಟ್ಟಿಗೂ ಕಾರಣವಾಗಿದೆ.ಕಾಫಿ ಪಾನೀಯವಷ್ಟೇ ಅಲ್ಲ. ತಣ್ಣಗಿನ ವಾತಾವರಣ, ಇಂಪಾದ ಸಂಗೀತ, ಆರೋಗ್ಯಕರ ಮಾತಿನ ಜೊತೆಗೆ ಕಾಫಿಯ ಪ್ರತಿ ಗುಟುಕಿಗೆ ಬೇರೆಯದೇ ರುಚಿ. ಕಾಫಿ- ಮಾತು-ಸಂಬಂಧವನ್ನು ಬೆಸೆದು ಅದನ್ನೇ ವ್ಯಾಪಾರದ ತಂತ್ರವಾಗಿಸಿಕೊಂಡ ಕಾಫಿ ಡೇ ಈಗ ಇನ್ನೊಂದು  ಹೆಜ್ಜೆ ಇಟ್ಟಿದೆ.ಯಾವುದೇ ಗೊಂದಲವಿಲ್ಲದೆ ನಿರಾಳವಾಗಿ ಕಾಫಿ ಕುಡಿದು ನಿಮ್ಮ ಸಮಯವನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳಿ ಎಂದು `ಕಾಫಿ ಮೊಮೆಂಟ್ ಪ್ರೀಪೇಡ್ ಕಾರ್ಡ್~ (ಪೂರ್ವಪಾವತಿ) ಹೊರತಂದಿದೆ.ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿ ಡೇ ಚೌಕದಲ್ಲಿ ಗುರುವಾರ ಮೊಟ್ಟ ಮೊದಲ ಬಾರಿಗೆ ಕಾರ್ಡ್ ಅನಾವರಣಗೊಂಡಿತು.ಕಾಮಿಡಿಯನ್ ಸಂಜಯ್ ಮನಕತಾಲಾ, ಜನಪ್ರಿಯ ಚುಂಬಕ್ ಇ- ಪೋರ್ಟಲ್‌ನ ವಿವೇಕ್ ಪ್ರಭಾಕರ್, ಕರೋಕೆ ಕಲಾವಿದ ಝೇಕ್ ಲಾರೆನ್ಸ್, ಮೆಟ್ರೊ ರಾಕ್ ಬ್ಯಾಂಡ್ `ಪುಶಿಂಗ್ ಟಿನ್~ನ ಯುವ ಕಲಾವಿದರು, ಆರ್‌ಜೆ ಪಿಜೋಶ್ ಎಲ್ಲರೂ ಕಾಫೆ ಡೇ ಜೊತೆಗಿನ ತಮ್ಮ ಸುಂದರ ಅನುಭವಗಳನ್ನು ಹಂಚಿಕೊಳ್ಳುತ್ತಾ ಕಾರ್ಡ್ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಪುಶಿಂಗ್ ಟಿನ್‌ನ ಸಂಗೀತ ಕಾರ್ಯಕ್ರಮವೂ ಜೊತೆಗೂಡಿತ್ತು.ಕಾಫಿ ಡೇಯಲ್ಲಿ ಹಣ ನೀಡುವ ಗೋಜನ್ನು ತಪ್ಪಿಸುವ ಸಲುವಾಗಿ ಈ ಕಾರ್ಡನ್ನು ಪರಿಚಯಿಸಲಾಗಿದೆ. ಕಾರ್ಡ್‌ಗೆ 100 ರೂಪಾಯಿಯಿಂದ 5001 ರೂ.ವರೆಗೂ ಟಾಪ್ ಅಪ್ ಮಾಡಿಸಿಕೊಳ್ಳಬಹುದು. ಕೇವಲ ಕಾಫಿಗೆ ಮಾತ್ರವಲ್ಲ; ಕಾಫಿ ಡೇನಲ್ಲಿ ಲಭ್ಯವಿರುವ ಜ್ಯೂಸ್, ಡೆಸರ್ಟ್, ಕುಕೀ, ಇನ್ನಿತರ ವಸ್ತುಗಳನ್ನು ಕೂಡ ಕಾರ್ಡ್ ಬಳಸಿ ಕೊಂಡುಕೊಳ್ಳಬಹುದು.ಈ ಕಾರ್ಡನ್ನು ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಪರಿಚಯಿಸಲಾಗಿದೆ. ಮಾರ್ಚ್ ನಂತರ ಭಾರತದ ಇನ್ನಷ್ಟು ಕಡೆ ವಿಸ್ತರಿಸಲಾಗುವುದು ಎಂದು ಕೆಫೆ ಕಾಫಿ ಡೇ ಮಾರ್ಕೆಟಿಂಗ್ ಅಧ್ಯಕ್ಷ ಕೆ.ರಾಮಕೃಷ್ಣನ್ ತಿಳಿಸಿದರು.ಕಾಫಿ ಡೇ ಎಲ್ಲ ವಯೋಮಿತಿಯವರಿಗೂ ಒಂದಲ್ಲಾ ಒಂದು ಅನುಭವ ನೀಡಿರುತ್ತದೆ. ಇದು ಈಗ ಜನರ ಜೀವನ ಶೈಲಿಯ ಭಾಗವೇ ಆಗಿಬಿಟ್ಟಿದೆ. ಈ ಪ್ರೀಪೇಡ್ ಕಾರ್ಡ್‌ನಿಂದ ಕಾಫಿ ಡೇ ನಿಮಗೆ ಇನ್ನಷ್ಟು ಸನಿಹವೆನಿಸಲಿದೆ ಎಂದರು. ಈ ಕಾರ್ಡನ್ನು ನಿಮ್ಮ ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ ಆಶ್ಚರ್ಯಕರ  ಉಡುಗೊರೆಯಂತೆಯೂ ನೀಡಬಹುದು ಎಂದು ಸಲಹೆ ನೀಡಿದರು.ಈ ಪ್ರೀಪೇಡ್ ಕಾರ್ಡ್‌ನಿಂದ ಹಣದ ಕಿರಿಕಿರಿಯನ್ನೂ ತಪ್ಪಿಸಬಹುದು. ನೀವು ಇಲ್ಲಿಗೆ ಬಂದಿರುವ ಉದ್ದೇಶವನ್ನು ಯಾವುದೇ ಅಡೆತಡೆಯಿಲ್ಲದೆ ಪೂರೈಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ ಸಂತಸ ಕೊಡುವ ವಿಷಯವೆಂದರೆ ಕಾರ್ಡ್ ಜೊತೆ ನಿಮ್ಮ ಹಣಕ್ಕೆ ಅನುಗುಣವಾಗಿ ಬೋನಸ್ ಇರುತ್ತದೆ.

 

500ಕ್ಕಿಂತ ಹೆಚ್ಚಿದ್ದರೆ ಶೇ 7.5 ಬೋನಸ್, ಇಲ್ಲದಿದ್ದರೆ ಶೇ 5ರಷ್ಟು ಬೋನಸ್ ಲಭ್ಯ. ಬೋನಸ್ ಜೊತೆಗೆ ಇನ್ನಿತರ ವಿಶೇಷ ಸೌಲಭ್ಯಗಳೂ ಉಂಟು. ಹಬ್ಬ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಉಡುಗೊರೆಗಳು ಸಿಗುತ್ತವೆ. ಗ್ರಾಹಕರಿಗೆ ಈ ಕಾರ್ಡ್ ಖಂಡಿತ ಮೆಚ್ಚುಗೆಯಾಗಲಿದೆ ಎಂದು ರಾಮಕೃಷ್ಣನ್ ನಂಬಿದ್ದಾರೆ.                                     

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry