ಕಾಫಿ ಬಳಕೆ ಹೆಚ್ಚಳ

7

ಕಾಫಿ ಬಳಕೆ ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಕಾಫಿ ಬಳಕೆ ಪ್ರಮಾಣವು 2011ರಲ್ಲಿ ಶೇ 2ರಷ್ಟು ಹೆಚ್ಚಿದ್ದು, 136 ದಶಲಕ್ಷ ಚೀಲಗಳಷ್ಟಾಗಿದೆ ಎಂದು ಅಂತರರಾಷ್ಟ್ರೀಯ ಕಾಫಿ ಒಕ್ಕೂಟ (ಐಸಿಒ) ಹೇಳಿದೆ.2010ರಲ್ಲಿ ಒಟ್ಟು 135 ದಶಲಕ್ಷ ಚೀಲಗಳಷ್ಟು ಕಾಫಿ ಬಳಕೆಯಾಗಿತ್ತು.  (ಪ್ರತಿ ಚೀಲ 60 ಕೆ.ಜಿ ತೂಕ ಹೊಂದಿರುತ್ತದೆ) ದೇಶೀಯ ಬೇಡಿಕೆಯ ಜತೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲೂ ಕಾಫಿ ಬಳಕೆ ಹೆಚ್ಚಿದೆ. 2003ರಿಂದ 2008ರ ವರೆಗೆ ಒಟ್ಟು ಜಾಗತಿಕ ಕಾಫಿ ಬಳಕೆಯು ಶೇ 42ರಷ್ಟು ಏರಿಕೆ ಕಂಡಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಭಾರತದಲ್ಲಿ ಕಾಫಿ ಬಳಕೆಯು ಶೇ 6ರಷ್ಟು ಹೆಚ್ಚಿದ್ದು, 1.8 ಲಕ್ಷ ಟನ್‌ಗಳಷ್ಟಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry