ಸೋಮವಾರ, ಅಕ್ಟೋಬರ್ 21, 2019
26 °C

ಕಾಫಿ ರಫ್ತು ವಹಿವಾಟು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): 2011ನೇ ಸಾಲಿನಲ್ಲಿ ದೇಶದ ಕಾಫಿ ರಫ್ತು ಶೇ 22ರಷ್ಟು ಹೆಚ್ಚಿದ್ದು,  ಅಂದಾಜಿಸಲಾಗಿರುವ 3.50ಲಕ್ಷ ಟನ್ ವಾರ್ಷಿಕ ಗುರಿಗೆ ಸಮೀಪದಲ್ಲಿದೆ ಎಂದು ಕಾಫಿ ಮಂಡಳಿ ಹೇಳಿದೆ.2010ರಲ್ಲಿ 2.88 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. ಡಿಸೆಂಬರ್ 29ರವರೆಗಿನ ಅಂಕಿ ಅಂಶಗಳ ಪ್ರಕಾರ ರೂ 4,859 ಕೋಟಿ ಮೊತ್ತದ  3.46 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿದೆ. ಈ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ಕಾಫಿ ರಫ್ತು ವಹಿವಾಟು ಶೇ 50ರಷ್ಟು ಹೆಚ್ಚಿದ್ದು, 2.94 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1.96 ಲಕ್ಷ ಟನ್‌ಗಳಷ್ಟು ಕಾಫಿ ರಫ್ತು ಮಾಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾಫಿ ರಫ್ತು ಶೇ 14ರಷ್ಟು ಇಳಿಕೆ ದಾಖಲಿಸುವ ಸಾಧ್ಯತೆ ಇದ್ದು, 2.40 ಲಕ್ಷ ಟನ್‌ಗಳಿಗೆ ಕುಸಿಯಲಿದೆ  ಎಂದು ಕಾಫಿ ಮಂಡಳಿ ಅಂದಾಜಿಸಿದೆ.

Post Comments (+)