ಶನಿವಾರ, ಮೇ 15, 2021
24 °C

ಕಾಫಿ ರಫ್ತು ಶೇ 2.85 ಇಳಿಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನಲ್ಲಿ ಈವರೆಗೆ 1,72,480 ಟನ್ ಕಾಫಿ ರಫ್ತಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 2.85ರಷ್ಟು ರಫ್ತು ತಗ್ಗಿದೆ ಎಂದು `ಕಾಫಿ ಮಂಡಳಿ' ಹೇಳಿದೆ.2012ರ ಜನವರಿ-ಜೂನ್ ಅವಧಿಯಲ್ಲಿ 1,77,555 ಟನ್ ಕಾಫಿಯನ್ನು ದೇಶದಿಂದ ರಫ್ತು ಮಾಡಲಾಗಿದ್ದಿತು. ಆದರೆ, ಈ ಬಾರಿ ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿನ ಧಾರಣೆ ಅಷ್ಟೇನೂ ಆಕರ್ಷಕವಾಗಿರದ ಕಾರಣ ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.ಕಳೆದ ಐದು ತಿಂಗಳಲ್ಲಿ ರೊಬುಸ್ಟಾ ಕಾಫಿ 93,213 ಟನ್(ಕಳೆದ ವರ್ಷ 98,863 ಟನ್) ಹಾಗೂ ಅರೇಬಿಕಾ 35,560 ಟನ್ (36,843 ಟನ್) ರಫ್ತಾಗಿದೆ ಎಂಬ ಮಾಹಿತಿ ಕಾಫಿ ಮಂಡಳಿಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.