ಕಾಫಿ ರಫ್ತು ಶೇ4.45 ಇಳಿಕೆ

7

ಕಾಫಿ ರಫ್ತು ಶೇ4.45 ಇಳಿಕೆ

Published:
Updated:
ಕಾಫಿ ರಫ್ತು ಶೇ4.45 ಇಳಿಕೆ

ನವದೆಹಲಿ(ಪಿಟಿಐ): ಭಾರತದ ಕಾಫಿ ರಫ್ತು ಈ ವರ್ಷದ ಜನವರಿ-ಜೂನ್ ಅವಧಿಯಲ್ಲಿ ಶೇ 4.45ರಷ್ಟು ಕುಸಿದಿದೆ.ವರ್ಷದ ಮೊದಲ ಆರು ತಿಂಗಳಲ್ಲಿ 1,91,055 ಟನ್(ರೂ2,818.35 ಕೋಟಿ) ಕಾಫಿ ರಫ್ತಾಗಿದೆ. 2012ರಲ್ಲಿ ಇದೇ ಅವಧಿಯಲ್ಲಿ 1,99,969 ಟನ್(ರೂ2,955.35 ಕೋಟಿ)ಕಾಫಿ ರಫ್ತಾಗಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಧಾರಣೆ ಕಡಿಮೆ ಆಗಿದ್ದುದೇ ರಫ್ತು ಇಳಿಮುಖವಾಗಲು ಕಾರಣ ಎಂದು ಕಾಫಿ ಮಂಡಳಿ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.ಅರೇಬಿಕಾ ಕಾಫಿ ಶೇ 4ರಷ್ಟು, ಇನ್‌ಸ್ಟಂಟ್ ಕಾಫಿ ರಫ್ತು ಶೇ 32ರಷ್ಟು  ಕಡಿಮೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry