ಕಾಫಿ ಶಾಪ್, ಸೈಕಲ್ ಸ್ಟ್ಯಾಂಡ್ ಸೌಲಭ್ಯ

7

ಕಾಫಿ ಶಾಪ್, ಸೈಕಲ್ ಸ್ಟ್ಯಾಂಡ್ ಸೌಲಭ್ಯ

Published:
Updated:

ಬೆಂಗಳೂರು: `ನಮ್ಮ ಮೆಟ್ರೊ~ ಮೊದಲ ವರ್ಷಾಚರಣೆ ಹಿನ್ನೆಲೆಯಲ್ಲಿ ಶನಿವಾರ ನಗರದ ಎಂಜಿ. ರಸ್ತೆಯ ಮೆಟ್ರೊ ನಿಲ್ದಾಣದಲ್ಲಿ ಸೈಕಲ್ ಸ್ಟ್ಯಾಂಡ್ ಸೌಲಭ್ಯವನ್ನು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಶಿವಶೈಲಂ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಸೈಕಲ್ ಸವಾರಿ ಮಾಡಿದರು.ಮೆಟ್ರೊ ನಿಲ್ದಾಣದಲ್ಲಿ ಆರಂಭಿಸಲಾದ ಕೆಫೆ ಕಾಫಿ ಡೇ ಮಳಿಗೆಗೂ ಚಾಲನೆ ನೀಡಲಾಯಿತು. ಶನಿವಾರ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದ ಮೆಟ್ರೊ ಪ್ರಯಾಣಿಕರು ಹೊಸ ಮಳಿಗೆಯಲ್ಲಿ ಕಾಫಿ ರುಚಿ ಸವಿದರು.

ಕೈಕೊಟ್ಟ ಲಿಫ್ಟ್

ಬೆಂಗಳೂರು: ಬೈಯ್ಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೆಲಕಾಲ ಲಿಫ್ಟ್ ಮಧ್ಯದಲ್ಲೇ ಸ್ಥಗಿತಗೊಂಡು ನಿಂತಿದ್ದರಿಂದ ತುಸು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಘಟನೆ ನಡೆದಾಗ ಕೆಲ ಪ್ರಯಾಣಿಕರು ಲಿಫ್ಟ್‌ನಲ್ಲಿ ಇದ್ದರು. ತಕ್ಷಣ ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಬಂದ ತಜ್ಞರು, ದುರಸ್ತಿಗೊಳಿಸಿ ಲಿಫ್ಟ್ ಮೇಲೆ ಬರುವಂತೆ ನೋಡಿಕೊಂಡರು. `ತಾಂತ್ರಿಕ ದೋಷದಿಂದ ಲಿಫ್ಟ್ ಸ್ಥಗಿತಗೊಂಡಿತ್ತು. ತಕ್ಷಣ ಸರಿಪಡಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ~ ಎಂದು ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry