ಕಾಬೂಲ್ನಲ್ಲಿ ಟ್ರಕ್ ಬಾಂಬ್: ಮೂವರು ದಾಳಿಕೋರರ ಬಲಿ

ಕಾಬೂಲ್(ಎಎಫ್ಪಿ): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಹೊರ ವಲಯದಲ್ಲಿ ವಿದೇಶಿಯರಿದ್ದ ಹೋಟೆಲ್ವೊಂದರ ಮೇಲೆ ಸೋಮವಾರ ನಸುಕಿನ ವೇಳೆ ಟ್ರಕ್ ಬಾಂಬ್ ದಾಳಿ ನಡೆದಿದೆ. ಮೂವರು ತಾಲಿಬಾನಿ ದಾಳಿಕೋರರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.
ಬೆಳಗಿನಜಾವ ದಾಳಿ ನಡೆದಿದೆ. ಪ್ರಬಲ ಸ್ಫೋಟಕಗಳು ತುಂಬಿದ್ದ ಟ್ರಕ್ ಅತಿಥಿಗೃಹದ ಉತ್ತರಭಾಗದ ಗೇಟ್ ಮೂಲಕ ಪ್ರವೇಶಿಸಿದೆ. ಏಳು ತಾಸು ಭದ್ರತಾ ಸಿಬ್ಬಂದಿ ನಡೆಸಿದ ಹೋರಾಟದಲ್ಲಿ ಮೂವರು ದಾಳಿಕೋರರನ್ನು ಹೊಡೆದುರುಳಿಸಲಾಗಿದೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.