ಕಾಮಗಾರಿಗೆ ಆಗ್ರಹಿಸಿ ರಸ್ತೆ ತಡೆ: ಸಂಚಾರ ಅಸ್ತವ್ಯಸ್ತ

ರಟ್ಟೀಹಳ್ಳಿ: ಮಾಸೂರ–ರಟ್ಟೀಹಳ್ಳಿ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳನ್ನು ಮುಚ್ಚಿ ಉತ್ತಮ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಹಿರೇಮೊರಬ ಗ್ರಾಮದಲ್ಲಿ ಸ್ನೇಹಜೀವಿ ಯುವಕ ಸಂಘ ಹಾಗೂ ಗ್ರಾಮಸ್ಥರು ಸೇರಿ ಬುಧವಾರ ಬೆಳಿಗ್ಗೆ ರಸ್ತೆ ತಡೆ ನಡೆಸಿದರು. ಈ ರಸ್ತೆಯಲ್ಲಿ ಅಪಘಾತ ಸಾಮಾನ್ಯವಾಗಿದ್ದು, ದುರಸ್ತಿ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗದ್ದರಿಂದ ಗ್ರಾಮಸ್ಥರು ಮತ್ತು ಸಂಘದ ಯುವಕರು ಸೇರಿ ರಸ್ತೆ ತಡೆ ನಡೆಸಿದರು.
ಇದರಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ನೂರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿದ್ದವು. ರಟ್ಟೀಹಳ್ಳಿಯಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ಇರುವ ಕಾರಣ ಎರಡು ಟ್ರ್ಯಾಕ್ಟರ್ಗಳನ್ನು ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಯಿತು. ಅನೇಕ ಮಹಿಳಾ ಪ್ರಯಾಣಿಕರು ಪ್ರತಿಭಟನೆಗೆ ಅಸಮಾಧಾನ ವ್ಯಕ್ತಪಡಿಸಿದರೂ ಪ್ರತಿಭಟನೆ ಪ್ರಯಾಣಕರ ಅನುಕೂಲಕ್ಕಾಗಿ ಮಾಡಲಾಗುತ್ತಿದೆ ಎಂದು ತಿಳಿಸಿ ಹೇಳಿದ ಮೇಲೆ ಪ್ರಯಾಣಿಕರೂ ಕೂಡಾ ಸುಮ್ಮನಾದರು.
ತಹಶೀಲ್ದಾರ್ ಶಕುಂತಲಾ ಚೌಗಲಾ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಎಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆಯಿಸಿ ವಿಷಯ ಚರ್ಚಿಸಿ ಮೇ 30ರೊಳಗಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಲಿಖಿತ ಭರವಸೆ ಪಡೆದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಮಧ್ಯಾಹ್ನ ೧ ಗಂಟೆಯವರೆಗೆ ಪ್ರತಿಭಟನೆ ನಡೆಸಲಾಯಿತು.
ಸ್ನೇಹಜೀವಿ ಯುವಕ ಸಂಘದ ನವೀನ ಪುಟ್ಟತಮ್ಮನವರ, ಆಂಜನೇಯ ಪುಟ್ಟತಮ್ಮನವರ, ಚಂದ್ರು ರೋತಿ, ಕಿರಣ ಪಾಟೀಲ, ಶಂಕರಗೌಡ ಕಡೂರ, ರುದ್ರಗೌಡ ಗಂಗಾಯಿಕೊಪ್ಪ, ಶಂಕ್ರು ದೊಡ್ಮನಿ, ರಾಕೇಶ ಗೌರಕ್ಕನವರ, ಕುಮಾರ ಕೋಟಿಹಾಳ, ಕುಮಾರ ಪೂಜಾರ, ಪ್ರದೀಪ ಹಂಚಿನಮನಿ, ಬಸವರಾಜ ಶಿದ್ಲಿಂಗಪ್ಪನವರ ಮುಂತಾದವರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.