ಕಾಮಗಾರಿ ಇನ್ನೆಷ್ಟು ದಿನ?

7

ಕಾಮಗಾರಿ ಇನ್ನೆಷ್ಟು ದಿನ?

Published:
Updated:
ಕಾಮಗಾರಿ ಇನ್ನೆಷ್ಟು ದಿನ?

ರಾಮಮೂರ್ತಿನಗರಕ್ಕೆ ವಾರ್ಡ್ ನಂ. 25, 26 ಮತ್ತು 51 ಸೇರಿವೆ. ಈ 3 ವಾರ್ಡ್‌ಗಳಲ್ಲಿ ಕುಡಿಯುವ ನೀರು, ಹಾಗೂ 28 ಚರಂಡಿಯ ಕಾಮಗಾರಿ ಸುಮಾರು 60 ರಷ್ಟು ಮುಗಿದಿದೆ. ಬಾಕಿ ಉಳಿದಿರುವ ಕಾಮಗಾರಿಯನ್ನು ಜಲ ಮಂಡಳಿಯವರು ಆದಷ್ಟು ಬೇಗ ಮುಗಿಸಬೇಕಾಗಿ ವಿನಂತಿ.ಜೊತೆಗೆ ಮುಖ್ಯವಾಗಿ ಕುಡಿಯುವ ನೀರಿನ ಕಾಮಗಾರಿ ಮುಗಿದಿರುವ ಕೆಲಕಡೆ ನೀರು ಬರುತ್ತದೆ, ಕೆಲಕಡೆ ಸೋರುತ್ತದೆ. ಅಲ್ಲದೆ ಎಲ್ಲೆಲ್ಲಿ ನೀರು ಬರುತ್ತದೆಯೋ ಆ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ.ಇಲ್ಲಿನ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ನವೆಂಬರ್ ತಿಂಗಳಲ್ಲೇ (ರಾಜ್ಯೋತ್ಸವಕ್ಕೆ) ಕಾವೇರಿ ನೀರು ಹರಿಸುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದರು. ಆದರೆ ಇದುವರೆಗೆ 25, 26 ಮತ್ತು 51ರ ವಾರ್ಡ್‌ಗಳಿಗೆ ಕುಡಿಯುವ ನೀರು ಬಂದೇ ಇಲ್ಲ.ಈ ಪರಿಸ್ಥಿತಿಯನ್ನು ಜಲ ಮಂಡಳಿಯವರು ಈ ಯೋಜನೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಕಾಮಗಾರಿಗಳನ್ನು ಬೇಗ ಮುಗಿಸಿ, ಜನರಿಗೆ ಕುಡಿಯುವ ನೀರು ಆದಷ್ಟು ಬೇಗ ದೊರಕಿಸಿಕೊಡಬೇಕೆಂದು ಈ ಮೂಲಕ ನಮ್ಮ ಸಂಘದ ಆಗ್ರಹ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry