ಕಾಮಗಾರಿ ಗುಣಮಟ್ಟ್ದ್ದದಿರಲಿ: ಬಗಲಿ

7

ಕಾಮಗಾರಿ ಗುಣಮಟ್ಟ್ದ್ದದಿರಲಿ: ಬಗಲಿ

Published:
Updated:

ಇಂಡಿ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ತಾಲ್ಲೂಕು ಕ್ರೀಡಾಂಗಣದ ಕಾಮಗಾರಿ ಒಳ್ಳೆಯ ಗುಣಮಟ್ಟದ್ದಾಗಿರಬೇಕು ಎಂದು ಶಾಸಕ ಡಾ. ಸಾರ್ವಭೌಮ ಬಗಲಿ ಅಧಿಕಾರಿಗಳಿಗೆ ಸೂಚಿಸಿದರು.ಅವರು ಸೋಮವಾರ ಉಪ ಕಂದಾಯ ವಿಭಾಗಾಧಿಕಾರಿಗಳ ಕಚೇರಿ ಯಲ್ಲಿ ಕೈಕೊಂಡಿರುವ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಮಾತನಾಡಿದರು. ಕ್ರೀಡಾಂಗಣದಲ್ಲಿ ಹೆಚ್ಚುವರಿಯಾಗಿ ಈಜುಗೊಳ, ಜಿಮ್, ಒಳಾಂಗಣ ಕ್ರೀಡಾಂಗಣ ಕಾಮಗಾರಿ ನಿರ್ಮಿಸಲು ಹೆಚ್ಚುವರಿ ಅಂದಾಜು ಪತ್ರಿಕೆ ಸಿದ್ಧಗೊಳಿಸಿ ಸರಕಾರಕ್ಕೆ ಪ್ರಸ್ತಾವ ಕಳಿಸಿಕೊಡಬೇಕು, ಅದನ್ನು ಸರಕಾರದ ಮಟ್ಟದಲ್ಲಿ ಸಂಬಂಧಪಟ್ಟವರ ಜೊತೆಗೆ ಚರ್ಚಿಸಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುವು ದಾಗಿ ತಿಳಿಸಿದರು.ಸಭೆಯ ನಂತರ ಉಪ ಕಂದಾಯ ವಿಭಾಗಾಧಿಕಾರಿ ಡಾ, ಅಶೋಕ ದುಡಗುಂಟಿ ಮತ್ತು ತಹಶೀಲ್ದಾರ ಜಿ.ಎಲ್. ಮೇತ್ರಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕ್ರೀಡಾಂಗಣದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಕ್ರೀಡಾಧಿಕಾರಿ ಆರ್.ಬಿ. ಉಪಾಸೆ ತಾಲ್ಲೂಕು ಕ್ರೆಡಾಧಿಕಾರಿ ಸಿ.ಎಸ್. ವಾಲೀಕಾರ ಮತ್ತು ಗುತ್ತಿಗೆದಾರ ನಿರ್ಮಿತಿ ಕೇಂದ್ರದ ಅಧಿಕಾರಿ ಯು.ಎನ್. ಮಲಗಿ ಅವರ ಜೊತೆಗೆ ಕ್ರೀಡಾಂಗಣದ ಕೆಲಸದ ಪ್ರಗತಿಯನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಉಪ ಕಂದಾಯ ವಿಭಾಗಾಧಿಕಾರಿ ಡಾ, ಅಶೋಕ ದುಡಗುಂಟಿ ಮಾತನಾಡಿ, ರೂ. 1.44 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ಕ್ರೀಡಾಂಗಣ ಕಾಮಗಾರಿಗೆ ಈಗಾಗಲೇ ಸರಕಾರದಿಂದ ರೂ. 70 ಲಕ್ಷ ಬಿಡುಗಡೆಯಾಗಿದೆ. ಇದರಲ್ಲಿ ಒಂದನೇ ಕಂತಾಗಿ ನಿರ್ಮಿತಿ ಕೇಂದ್ರಕ್ಕೆ ರೂ. 35 ಲಕ್ಷ ಬಿಡುಗಡೆ ಮಾಡಲಾಗಿದೆ. ಕ್ರೀಡಾಂಗಣಕ್ಕೆ ಅಗತ್ಯವಿದ್ದ ಇನ್ನುಳಿದ ಹಣವನ್ನು ಬಿಡುಗಡೆ ಮಾಡಬೇಕೆಂದು ಈಗಾಗಲೇ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೇ 35 ಕ್ರೀಡಾಂಗಣದ ಕಾಮಗಾರಿ ಮುಗಿದಿದೆ ಎಂದು ಹೇಳಿದರು.ತಹಶೀಲ್ದಾರ ಜಿ.ಎಲ್. ಮೇತ್ರಿ ಮಾತನಾಡಿ, ಕ್ರೀಡಾಂಗಣಕ್ಕೆ  ಅಗತ್ಯವಿದ್ದ ಅನುದಾನವನ್ನು ಬಿಡುಗಡೆ ಮಾಡುವಲ್ಲಿ ಇಂಡಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರು ಶ್ರಮಿಸಿದ್ದಾರೆ. ಇದೀಗ ಹೆಚ್ಚುವರಿ ಅನುದಾನ ಬಿಡುಗಡೆ ಗೊಳಿಸಲು ಭರವಸೆ ನೀಡಿದ್ದಾರೆ. ಅವರ ಶ್ರಮದಿಂದ ಪಟ್ಟಣದಲ್ಲಿ ಒಂದು ಒಳ್ಳೆಯ ಕ್ರೀಡಾಂಗಣ ನಿರ್ಮಾಣವಾಗ ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾ ಅಧಿಕಾರಿ ಉಪಾಸೆ, ಸಿ.ಎಸ್. ವಾಲೀಕಾರ, ಗುತ್ತಿಗೆದಾರ ಮಲಗಿ, ಎ.ಬಿ. ಧನಗೊಂಡ, ಎಸ್.ಜಿ. ಲೋಣಿ ಉಪಸ್ಥಿತರ್ದ್ದಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry