ಭಾನುವಾರ, ನವೆಂಬರ್ 17, 2019
29 °C

ಕಾಮಗಾರಿ ಗುಣಮಟ್ಟ ಕಾಪಾಡಿ: ಎಸ್‌ಕೆಬಿ

Published:
Updated:

ಚಿತ್ರದುರ್ಗ: ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ಶಾಸಕ ಎಸ್.ಕೆ. ಬಸವರಾಜನ್ ಸೂಚಿಸಿದರು.ಭಾನುವಾರ ಜಿಲ್ಲಾ ಯಾದವ (ಗೊಲ್ಲರ) ವಿದ್ಯಾರ್ಥಿ ನಿಲಯದ ಕಂಪೌಂಡ್ ನಿರ್ಮಾಣಕ್ಕೆ ಶಿಲನ್ಯಾಸ ನೆರವೇರಿಸಿ ಅವರು ಮಾತನಾಡಿದರು.ಶಾಸಕರ ಅನುದಾನದಲ್ಲಿ ಕಂಪೌಂಡ್ ನಿರ್ಮಾಣಕ್ಕೆ ್ಙ 3 ಲಕ್ಷ ನೀಡಿದ್ದು, ಈ ಹಣ ಸದ್ಭಳಕೆಯಾಗಬೇಕು. ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುತ್ತೇನೆ. ಕಾಮಗಾರಿಗಳಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರವಹಿಸಬೇಕು ಎಂದು ನುಡಿದರು.ಜಿಲ್ಲಾ ಯಾದವ (ಗೊಲ್ಲರ) ಸಂಘದ ಅದ್ಯಕ್ಷ ಡಾ.ಕಾಟಪ್ಪ ಮಾತನಾಡಿ, ಶಾಸಕರು ಕಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಿರುವುದು ಅಭಿನಂದನೀಯ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಶಿವು ಯಾದವ್ ಮಾತನಾಡಿ, ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಾಸಕರು ಅನುದಾನ ನೀಡಬೇಕು ಎಂದು ಕೋರಿದರು.ಸಂಘದ ಉಪಾಧ್ಯಕ್ಷ ಮೈಲಾರಪ್ಪ, ನಿರ್ದೇಶಕರಾದ ವೆಂಕಟೇಶ್, ಗೋಪಾಲಕೃಷ್ಣ, ಡಿ. ಶಿವಣ್ಣ, ಹನುಮಂತಪ್ಪ, ಕರಿಯಣ್ಣ, ಬಿ.ಪಿ. ಲಿಂಗಾರೆಡ್ಡಿ, ಮಾಜಿ ಶಾಸಕ ಎ.ವಿ. ಉಮಾಪತಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮಹಾಲಿಂಗಪ್ಪ, ನಗರಸಭೆ ಸದಸ್ಯ ಸಿ.ಟಿ. ಕೃಷ್ಣಮೂರ್ತಿ, ಎಪಿಎಂಸಿ ಸದಸ್ಯ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯ ರವಿಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ನಾಗೇಂದ್ರಪ್ಪ, ತಿಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

ವೆಂಕಟೇಶ್ ಸ್ವಾಗತಿಸಿದರು. ಲಿಂಗಾರೆಡ್ಡಿ ವಂದಿಸಿದರು.ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಕಳವು

ನಗರದ ಕೋಟೆ ಪ್ರೌಢಶಾಲೆ ಪಕ್ಕದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸಂಸ್ಥೆಗೆ ಸೇರಿದ ಎನ್‌ಎಸ್‌ಎಸ್ ಕೊಠಡಿಯಲ್ಲಿ ಕಳ್ಳತನ ಮಾಡಲಾಗಿದೆ.ಕೊಠಡಿಯ ಮೇಲಿನ ಹೆಂಚುಗಳನ್ನು ತೆಗೆದು ಒಳಗೆ ಪ್ರವೇಶಿಸಿ 4 ಬೀಗಲ್ಸ್, 4 ಸಲಕೆಗಳು, 2 ಪಿಕಾಸಿಗಳು, 9 ಲೇಜಿಮ್‌ಗಳು ಸೇರಿದಂತೆ ಒಟ್ಟು ್ಙ 2,415 ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.

ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)