ಶುಕ್ರವಾರ, ಮೇ 27, 2022
29 °C

ಕಾಮಗಾರಿ ತ್ವರಿತಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರಸಭೆಯು ಇಲ್ಲಿನ ರಾಮಲಿಂಗೇಶ್ವರ ಕಾಲೋನಿ, ಐಡಿಎಸ್‌ಎಂಟಿ ಬಡಾವಣೆ ಸೇರಿದಂತೆ ವಿವಿಧ ಕಡೆ 13 ಕೋಟಿ ರೂ ಮೊತ್ತದಲ್ಲಿ ಕೈಗೊಂಡ ಕಾಮ ಗಾರಿಯಲ್ಲಿ ಪೂರ್ಣಗೊಂಡ ಏಳುವರೆ ಕೋಟಿ ರೂ ಮೊತ್ತದ ಕಾಮ ಗಾರಿಯನ್ನು ಶುಕ್ರವಾರ ನಗರಸಭೆ ಅಧ್ಯಕ್ಷೆ ಮಮತಾ ಸುಧಾಕರ ನೇತೃತ್ವದ ಸದಸ್ಯರು ಮತ್ತು ಅಧಿಕಾರಿಗಳ ನಿಯೋಗವು ಪರಿಶೀಲನೆ ನಡೆಸಿತು.ಏಳುವರೆ ಕೋಟಿ ರೂ ಮೊತ್ತದಲ್ಲಿ ಕೈಗೊಂಡ ಬಡಾವಣೆಯ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕಾಮ ಗಾರಿಗಳನ್ನು ಪರಿಶೀಲಿಸಿದರು. ಕೆಲ ಕಡೆ ಉತ್ತಮ ಕಾಮಗಾರಿ ಕೈಗೊಂಡಿ ರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅಧ್ಯಕ್ಷೆ, ಆಮೆ ವೇಗದಲ್ಲಿ ನಡೆದಿರುವ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.ಉಪಾಧ್ಯಕ್ಷೆ ಕೆ ಸುಲೋಚನಾ, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಸದಸ್ಯರಾದ ಜೆ ಶಿವಮೂರ್ತಿ, ಬಿ ತಿಮ್ಮಾರೆಡ್ಡಿ, ಶಿವರಾಜ, ಆಯುಕ್ತ ತಿಪ್ಪೇಶ, ಎಂಜನಿಯರ್ ಮಲ್ಲಿ ಕಾರ್ಜುನ ಹಾಗೂ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.