ಗುರುವಾರ , ಮೇ 6, 2021
27 °C

ಕಾಮಗಾರಿ ನಡೆಯದಿದ್ದರೂ ಕೂಲಿ ಖಾತ್ರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ಸಮೀಪದ ಕುದುರೂರು ಗ್ರಾಮ ಪಂಚಾಯ್ತಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಳ್ಳು ಮಾನವ ದಿನಗಳನ್ನು ದಾಖಲಿಸಿ ಕಾಮಗಾರಿಯನ್ನೇ ನಡೆಸದೇ ಸುಮಾರು ಹತ್ತು ಲಕ್ಷಕೂ ಹೆಚ್ಚು ಕೂಲಿಯನ್ನು ಪಾವತಿಸಲು ಮುಂದಾಗಿದೆ.`ಪ್ರಜಾವಾಣಿ~ಗೆ ಸಿಕ್ಕ ಮಾಹಿತಿ ಮತ್ತು ಯೋಜನೆಯ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರವೇ ಕುದುರೂರು ಗ್ರಾಮ ಪಂಚಾಯ್ತಿ 2011-12ನೇ ಸಾಲಿನ ಮಾರ್ಚ್ 31ಕ್ಕೆ ಮುಕ್ತಾಯಗೊಂಡ ಆರ್ಥಿಕ ವರ್ಷದ ಪ್ರಗತಿ ರೂ 40 ಲಕ್ಷದ ಗಡಿ ದಾಟಿದೆ.ಆದರೆ, ಪೆಬ್ರುವರಿ ತಿಂಗಳಲ್ಲಿ ಕೊನೆಯ ಹೊತ್ತಿಗೆ ಕೇವಲ ನಾಲ್ಕು ಲಕ್ಷದ ಕಾಮಗಾರಿ ನಿರ್ವಹಿಸಿದ ಪಂಚಾಯ್ತಿ ಮಾರ್ಚ್ ಒಂದೇ ತಿಂಗಳಲ್ಲಿ ರೂ 20 ಲಕ್ಷಕ್ಕೂ ಹೆಚ್ಚು ವೆಚ್ಚದ ಕಾಮಗಾರಿ ನಡೆದಿರುವ ಬಗ್ಗೆ ಎಂಇಎಸ್ ದಾಖಲಿಸಿ, ಕೂಲಿ ಪಾವತಿಗಾಗಿ ಎದುರು ನೋಡುತ್ತಿದೆ.ಗ್ರಾಮ ಪಂಚಾಯ್ತಿ ಏಕಾಏಕಿ ಸಾಧನೆಯನ್ನು ಅಚ್ಚರಿಗೊಂಡ ಸಾಗರ ತಾಲ್ಲೂಕು ಪಂಚಾಯ್ತಿ ಸದಸ್ಯ ಹರೀಶ್‌ಗಂಟೆ ಮತ್ತು ವಿವಿಧ ಸಂಘಟನೆಗಳ ಮುಖಂಡರು ಮಾಧ್ಯ ಮ ಪ್ರತಿನಿಧಿಗಳ ಜತೆ ಕಾಮಗಾರಿ ನಡೆದಿರುವ ಸ್ಥಳ ಪರಿಶೀಲಿಸಲು ಬುಧವಾರ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದಾಗ ಕಾಮಗಾರಿ ನಡೆಯದೇ ಬಿಲ್ಲು ಪಾವತಿಸಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂತು.ಪಂಚಾಯ್ತಿ ವ್ಯಾಪ್ತಿಯ ಕುದುರೂರು, ಬೆಳಮಕ್ಕಿ, ಸಸಿಗೊಳ್ಳಿ, ಹಾರಿಗೆ ಬಸದಿ ಮುಂತಾದ ಸ್ಥಳಗಳಲ್ಲಿ ಹಸಿರೀಕರಣಕ್ಕೆ ಗುಂಡಿಗಳನ್ನು ತೆಗೆಯುವ ಕೆಲಸಕ್ಕೆ ಮಾನವದಿನಗಳನ್ನು ದಾಖಲಿಸಿ, ಎಂಜಿನಿಯರ್‌ನಿಂದ ಎಂಬಿ ಪ್ರಕ್ರಿಯೆ ಮುಗಿಸಿ ತಲಾ ರೂ 42 ಸಾವಿರ ಮೊತ್ತಕ್ಕೆ ಎಒಇಎಸ್ ಪ್ರಕ್ರಿಯೆ ಮುಗಿಸಲಾಗಿದೆ. ಆದರೆ, ಸ್ಥಳದಲ್ಲಿ ಕಾಮಗಾರಿಯೇ ನಡೆಯದಿರುವುದು ಭೇಟಿ ಸಂದರ್ಭದಲ್ಲಿ ಗಮನಕ್ಕೆ ಬಂತು.ಹಸಿರೀಕರಣ ಹೊರತಾಗಿ ಮಾವಿನಕೇವಿ, ಬೊಬ್ಬಿಗೆ, ಕೊಡನವಳ್ಳಿ ಗ್ರಾಮದಲ್ಲಿ ಜಾಗ ಸಮತಟ್ಟು, ಹೊಳೆದಂಡೆ ಕಟ್ಟುವ ಕಾಮಗಾರಿಗೆ ಮಾನವ ದಿನವನ್ನು ದಾಖಲಿಸಿದ್ದರೂ, ಕಳೆದ ಮೂರು ದಿನದಿಂದ ನಿರಂತರವಾಗಿ ಜೆಸಿಬಿ ಯಂತ್ರಗಳ ಮೂಲಕ ಕಾಮಗಾರಿ ನಿರ್ವಹಿಸಿದ ಬಗ್ಗೆ ಸ್ವತಃ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದರು.ಎಂಇಎಸ್ ದಾಖಲಿಸುವ ಸಂದರ್ಭದಲ್ಲಿ ಸಲ್ಲಿಸಬೇಕಾದ ಎಲ್ಲ ದಾಖಲಾತಿಯನ್ನು ಪಡೆದೇ ಕಾಮಗಾರಿ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಜತೆಗೆ ಎಂಜಿನಿಯರುಗಳು ಇದರಲ್ಲಿ ಶಾಮೀಲಾಗಿರುವ ಶಂಖೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ ತಾ.ಪಂ. ಸದಸ್ಯ ಹರೀಶ್‌ಗಂಟೆ ತಪ್ಪಿತಸ್ಥ ಅಧಿಕಾರಿಗಳ ಕ್ರಮಕ್ಕೆ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.