ಬುಧವಾರ, ಡಿಸೆಂಬರ್ 11, 2019
27 °C

ಕಾಮಗಾರಿ ಪೂರ್ಣಗೊಳಿಸಿ

Published:
Updated:
ಕಾಮಗಾರಿ ಪೂರ್ಣಗೊಳಿಸಿ

ಬ್ಯಾಟರಾಯನಪುರದಿಂದ ಪೀಣ್ಯಕ್ಕೆ ಪ್ರತಿದಿನ ಉದ್ಯೋಗ ನಿಮಿತ್ತ ನ್ಯೂ ಬಿಇಎಲ್‌ ವೃತ್ತದ ಮೂಲಕ ವರ್ತುಲ ರಸ್ತೆಗೆ ಪ್ರಯಾಣಿಸುತ್ತೇನೆ. ಇಲ್ಲಿ ನಡೆದಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಾಗಿ ಈ ವೃತ್ತ ಸಮಸ್ಯೆಯ ಕೂಪವಾಗಿದೆ.

ಮೊದಲಾರ್ಧ ಮುಗಿಯುತ್ತಲೇ ಎರಡನೇ ಭಾಗದ ಕಾಮಗಾರಿ ಶುರು ಮಾಡಲಾಗಿದ್ದರೂ ಇಲ್ಲಿ ವಿಪರೀತ ಸಂಚಾರ ದಟ್ಟಣೆ. ಯೋಜಿತವಾಗಿ ಕೆಲಸ ಮಾಡಿದರೆ 3ರಿಂದ 6 ತಿಂಗಳೊಳಗೆ ಮುಗಿಸಬಹುದು. ದಯವಿಟ್ಟು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಪರಿಗಣಿಸಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.

– ಎನ್‌.ಆರ್‌. ಸುರೇಶ್‌, ಲಾರ್ಸನ್‌ ಅಂಡ್‌ ಟೂಬ್ರೊ

ಪ್ರತಿಕ್ರಿಯಿಸಿ (+)