ಕಾಮಗಾರಿ ಬೇಗ ಮುಗಿಸಲಿ

ಗುರುವಾರ , ಜೂಲೈ 18, 2019
22 °C

ಕಾಮಗಾರಿ ಬೇಗ ಮುಗಿಸಲಿ

Published:
Updated:

ಸುಮಾರು 10-15 ದಿವಸಗಳಿಂದ ಕತ್ರಗುಪ್ಪೆಯ ಭುವನೇಶ್ವರಿ ನಗರಕ್ಕೆ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸುವಲ್ಲಿ ಚೇಂಬರ್ ಕೊಳವೆ ಅಳವಡಿಸಲು ರಸ್ತೆ ಅಗೆದಿದ್ದಾರೆ. ಹೀಗಾಗಿ ಈ ರಸ್ತೆಯಲ್ಲಿ (ಡಾ. ವಿಷ್ಣುವರ್ಧನ ರಸ್ತೆ) ಭುವನೇಶ್ವರಿ ನಗರಕ್ಕೆ ಬರುತ್ತಿದ್ದ ಎಲ್ಲಾ ಬಸ್ಸುಗಳ (ಮಾರ್ಗಸಂಖ್ಯೆ 45ಎ, 45ಬಿ, 34ಇ ) ಸಂಚಾರ ಸ್ಥಗಿತವಾಗಿದೆ.

ಇದರಿಂದ ವೃದ್ಧರು, ಮಹಿಳೆಯರು ಮಕ್ಕಳೆನ್ನದೆ ಇಲ್ಲಿನ ನಿವಾಸಿಗಳೆಲ್ಲ ಬಿಸಿಲು, ಮಳೆಯಲ್ಲೇ ಫುಡ್‌ವರ್ಲ್ಡ್‌ವರೆಗೆ 1 ಕಿಮಿ ನಡೆದೇ ಹೋಗಿ ಬಸ್ ಹತ್ತಬೇಕಿದೆ. ಆದ್ದರಿಂದ ಸಂಬಂಧಿಸಿದವರು ಆದಷ್ಟು ಬೇಗ ಕಾಮಗಾರಿ ಮುಗಿಸಿ ಬಸ್‌ಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿ ಎಂದು ಕೋರಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry