ಕಾಮಗಾರಿ ಮಂಜೂರಾತಿಗೆ ಒತ್ತಾಯ

7

ಕಾಮಗಾರಿ ಮಂಜೂರಾತಿಗೆ ಒತ್ತಾಯ

Published:
Updated:

ತುರುವೇಕೆರೆ: ರಾಜ್ಯ ಸರ್ಕಾರದ 50:54 ಲೆಕ್ಕಪತ್ರ ಶೀರ್ಷಿಕೆಯಡಿ ರಸ್ತೆ ಅಭಿವೃದ್ಧಿಗೆ ನೀಡಲಾಗುವ ಅನುದಾನ ಹಾಗೂ ಸಿಆರ್‌ಎಫ್ ಯೋಜನೆಯಡಿ 2013:-14ನೇ ಸಾಲಿಗೆ ತಾಲ್ಲೂಕಿಗೆ ಯಾವುದೇ ಕಾಮಗಾರಿ ಮಂಜೂರಾಗದಿರುವ  ಬಗ್ಗೆ ವಿವಿಧ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಲೋಕೋ­ಪಯೋಗಿ ಇಲಾಖೆ ಸಹಾಯಕ ಕಾರ್ಯ­ಪಾಲಕ ಎಂಜಿನಿಯರ್‌ಗೆ ಮುತ್ತಿಗೆ ಹಾಕಿ ವಾಗ್ವಾದ ನಡೆಸಿದರು.2013–-14ನೇ ಸಾಲಿನ 50:54 ಲೆಕ್ಕಪತ್ರ ಶೀರ್ಷಿಕೆಯಡಿ  ಮತ್ತು  ಸಿಆರ್ಎಫ್ ಯೋಜನೆಯಡಿ ತಾಲ್ಲೂ­ಕಿನ ಯಾವುದೇ ಹೋಬಳಿಗೆ ಒಂದೇ ಒಂದು ರಸ್ತೆ ಕಾಮಗಾರಿಯೂ ಮಂಜೂ­ರಾಗಿಲ್ಲ. ತುರುವೇಕೆರೆ ವಿಧಾನಸಭೆ ಕ್ಷೇತ್ರಕ್ಕೆ ಸಿಆರ್ಎಫ್ ಯೋಜನೆಯಡಿ ಒಟ್ಟು ₨ 13.5 ಕೋಟಿ ಮೊತ್ತದ ಕಾಮಗಾರಿಗಳು ಮಂಜುರಾಗಿವೆ. ಆದರೆ ಇವೆಲ್ಲ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ವ್ಯಾಪ್ತಿಗೆ ಸೇರುತ್ತವೆ ಎಂದು ದೂರಿದರು.ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸೋಲೊ­ಪ್ಪಿದ ಗೀತಾ ರಾಜಣ್ಣ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಹಾಗೂ ಸಚಿವರನ್ನು ದಿಕ್ಕು ತಪ್ಪಿಸಿ  ತಾಲ್ಲೂಕಿಗೆ ಅನ್ಯಾಯ ಮಾಡಿದ್ದಾರೆ.ಇಲಾಖೆ ಈ ಕೂಡಲೇ ತಾಲ್ಲೂಕಿನ 4 ಹೋಬಳಿಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಾ.ಪಂ. ಅಧ್ಯಕ್ಷ ಲಕ್ಷ್ಮೀಕಾಂತ್ ಮತ್ತು  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್ ಒತ್ತಾಯಿಸಿದರು.ಇದಕ್ಕೆ ಸ್ಪಷ್ಟೀಕರಣ ನೀಡಿದ ಲೋಕೋಪಯೋಗಿ ಇಲಾಖೆಯ ಎಂಜಿ­ನಿ­ಯರ್ ದಯಾನಂದ್ ತಾಲ್ಲೂಕು ವ್ಯಾಪ್ತಿಯ ವಿವಿಧ   ಕಾಮಗಾರಿ­ಗಳಿಗಾಗಿ ₨ 10.5 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪೈಕಿ ಯಾವುದೇ ರಸ್ತೆ ಕಾಮಗಾರಿಯೂ ಮಂಜೂ­ರಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಪರಿಹಾರ ವಿಳಂಬ: ಖಂಡನೆ

ತುಮಕೂರು: ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ ಶೀಘ್ರ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಹಾನಿ ಸಂಭವಿಸಿ ನಾಲ್ಕು ತಿಂಗಳು ಕಳೆದರೂ; ನಗರಸಭೆ ಆಡಳಿತ ಪರಿ­ಹಾರ ಬಿಡುಗಡೆ ಮಾಡಿಲ್ಲ. ಬಡವರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈಗಲಾದರೂ ಸಂಬಂಧ­ಪಟ್ಟವರು ಬಡವರಿಗೆ ಆಸರೆ ಒದಗಿಸ­ಬೇಕು ಎಂದು ಸಮಿತಿಯ ನಗರ ಸಂಚಾಲಕ ವಿ.ಗೋಪಾಲ್‌ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry