ಶುಕ್ರವಾರ, ಜನವರಿ 24, 2020
27 °C

ಕಾಮಗಾರಿ ಮುಗಿಸಿ

– ರಾಮಕೃಷ್ಣ,ಲಗ್ಗೆರೆ Updated:

ಅಕ್ಷರ ಗಾತ್ರ : | |

ಹೊರ ವರ್ತುಲ ರಸ್ತೆಯಲ್ಲಿ ಡಾ. ರಾಜ್‌ಕುಮಾರ್‌ ಸಮಾಧಿ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಬೆಳಗಾಯಿತೆಂದರೆ ಇಲ್ಲಿ ವಾಹನ ದಟ್ಟಣೆಯ ಸಮಸ್ಯೆ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿದೆ.

ಬಹಳಷ್ಟು ಮಂದಿ ಪೀಣ್ಯ, ನಾಗವಾರ, ಮಾನ್ಯತಾ ಟೆಕ್‌ಪಾರ್ಕ್‌, ವೈಟ್‌ ಫೀಲ್ಡ್‌ ಮುಂತಾದ ಕಡೆ ಕಚೇರಿಗೆ ಹೋಗುವವರು ಈ ದಾರಿಯನ್ನು ಬಳಸುತ್ತಾರೆ. ಆದರೆ ಇಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ. ಒಂದು ಸಿಗ್ನಲ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.ಇದು ಸಾಲದು ಎಂಬಂತೆ ರೈಲ್ವೇ ಗೇಟ್‌ ಬಳಿಯೂ ಮೈಲುಗಟ್ಟಲೆ ನಿಂತ ವಾಹನಗಳನ್ನು ಹಾದು ಹೋಗಬೇಕು. ಬೃಹತ್‌ ರಸ್ತೆ ಕಾಮಗಾರಿ ಅಧಿಕಾರಿಗಳು ಈ ಹಾದಿಯಲ್ಲಿನ ಮೇಲು ಸೇತುವೆ ಕಾಮಗಾರಿಯನ್ನು ಶೀಘ್ರ ಮುಗಿಸಿದಲ್ಲಿ ಈ ಭಾಗದಲ್ಲಿ ನಿತ್ಯ ಓಡಾಡುವ ನೌಕರರು, ವ್ಯಾಪಾರಸ್ಥರು, ಸಾಮಾನು ಸರಂಜಾಮು ಸಾಗಿಸುವ ಟ್ರಕ್‌ಗಳು, ನಗರ ಸಾರಿಗೆ ಬಸ್ಸುಗಳ ಪ್ರಯಾಣಿಕರು ಇತ್ಯಾದಿ ಎಲ್ಲರಿಗೂ ಅನುಕೂಲವಾಗಲಿದೆ.

ಪ್ರತಿಕ್ರಿಯಿಸಿ (+)