ಕಾಮನ್‌ವೆಲ್ತ್ ಹಗರಣ : ಕಲ್ಮಾಡಿ ವಿರುದ್ಧ ಆರೋಪ ಪಟ್ಟಿ

7

ಕಾಮನ್‌ವೆಲ್ತ್ ಹಗರಣ : ಕಲ್ಮಾಡಿ ವಿರುದ್ಧ ಆರೋಪ ಪಟ್ಟಿ

Published:
Updated:
ಕಾಮನ್‌ವೆಲ್ತ್ ಹಗರಣ : ಕಲ್ಮಾಡಿ ವಿರುದ್ಧ ಆರೋಪ ಪಟ್ಟಿ

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರೀಡಾಕೂಟದ ಸಂಘಟನಾ ಸಮಿತಿಯ ಉಚ್ಛಾಟಿತ ಅಧ್ಯಕ್ಷ ಸುರೇಶ್ ಕಲ್ಮಾಡಿ ಸೇರಿದಂತೆ ಹತ್ತು ಮಂದಿ ವಿರುದ್ಧ ದೆಹಲಿ ಕೋರ್ಟ್ ಸೋಮವಾರ ಆರೋಪ ಪಟ್ಟಿ ಸಿದ್ಧಪಡಿಸಿದೆ.

ಉಚ್ಛಾಟಿತ ಅಧ್ಯಕ್ಷ ಸುರೇಶ್ ಕಲ್ಮಾಡಿ, ಕ್ರೀಡಾಕೂಟದ ಕಾರ್ಯದರ್ಶಿ ಲಲಿತ್ ಬಾನೋಟ್ ಸೇರಿದಂತೆ ಒಟ್ಟು ಹತ್ತು ಮಂದಿ ವಿರುದ್ಧ ವಂಚನೆ, ಪಿತೂರಿ ಮತ್ತು ಕ್ರೀಡಾಕೂಟದ ಭ್ರಷ್ಟಾಚಾರ ಪ್ರಕರಣದಲ್ಲಿ 90 ಕೋಟಿ ನಷ್ಟಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ.

ಭಾರತೀಯ ದಂಡ ಸಂಹಿತೆಯಡಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಧೀಶ ರವೀಂದ್ರ ಕೌರ್ ಅವರು ಈ ಆರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳ ದಾಖಲೀಕರಣ ಫೆ. 20ರ ದಿನಾಂಕವನ್ನು ಕೋರ್ಟ್ ನಿಗದಿಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry