ಬುಧವಾರ, ಜನವರಿ 29, 2020
27 °C

ಕಾಮಾಲೆ ಜ್ವರ; ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಮುಂಗಾರು ಮಳೆಗೂ ಮೊದಲೇ ಜಿಲ್ಲೆಯಲ್ಲಿ ಕಾಮಾಲೆ ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಕುಂಬಳೆಯ ಕೊಯಿಪ್ಪಾಡಿ ಕಡಪ್ಪುರ ನಿವಾಸಿ ಹರೀಂದ್ರನ್ (49) ಮತ್ತು ಹೊಸದುರ್ಗದ ಮಾವುಂಗಾಲ್ ನಿವಾಸಿ ಬಾಬು (28) ಗುರುವಾರ ಮೃತಪಟ್ಟಿದ್ದಾರೆ.20 ದಿನಗಳ ಹಿಂದೆ ಹರೀಂದ್ರನ್ ಅವರಿಗೆ ಕಾಮಾಲೆ ಜ್ವರ ಬಾಧಿಸಿತ್ತು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಗುರುವಾರ ರಾತ್ರಿ ಸಾವಿಗೀಡಾದರು. ಕುಂಬಳೆ ಕೊಯಿಪ್ಪಾಡಿ, ಮೊಗ್ರಾಲ್, ಪೇರಾಲ್ ಪ್ರದೇಶಗಳಲ್ಲಿ ಹಳದಿ ಕಾಮಾಲೆ ಜ್ವರ ವ್ಯಾಪಕವಾಗಿ ಹರಡುತ್ತಿದ್ದರೂ ಆರೋಗ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರತಿಕ್ರಿಯಿಸಿ (+)