ಸೋಮವಾರ, ಮೇ 23, 2022
24 °C

ಕಾಮಾಸಕ್ತಿಯೇ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನನ್ನಲ್ಲಿ ಲೈಂಗಿಕ ಆಸಕ್ತಿಯೇ ಇಲ್ಲ; ಪುರುಷ ಸಹಜವಾದ ಕಾಮನೆಗಳೂ ಇಲ್ಲ. ಈ ಬಗ್ಗೆ ಯಾವುದೇ ಪರೀಕ್ಷೆಗೆ ನಾನು ಸಿದ್ಧ!~ ಎಂದು ಸವಾಲು ಹಾಕಿದವರು ಸ್ವಾಮಿ ನಿತ್ಯಾನಂದ.ತಮಿಳುನಾಡಿನ ಮದುರೈನ ಆಧೀನಂ ಪೀಠದಲ್ಲಿ ಸುದೀರ್ಘವಾಗಿ ಮಾತನಾಡಿದ ಅವರು ಲೈಂಗಿಕ ದೌರ್ಜನ್ಯವೂ ಸೇರಿದಂತೆ ತಮ್ಮ ಮೇಲಿನ ಆರೋಪಗಳಿಗೆಲ್ಲ ನಗುನಗುತ್ತಲೇ ಉತ್ತರಿಸುತ್ತಾ ಹೋದರು.ನಿಮ್ಮ ಮೇಲೆ ಲೈಂಗಿಕ ಶೋಷಣೆಯ ಆರೋಪ ಇದೆ. ಆದರೆ ನಿಮ್ಮನ್ನು ನೀವೇ ಲಿಂಗಾತೀತ ಎಂದು ಹೇಳಿಕೊಳ್ಳುತ್ತಿದ್ದೀರ. ಇದನ್ನು ಹೇಗೆ ವಿವರಿಸುವಿರಿ?

ದೈಹಿಕವಾಗಿ ನಾನು ಪುರುಷ ಶರೀರದಲ್ಲಿರುವೆ. ಆದರೆ ಆಧ್ಯಾತ್ಮಿಕ ಪ್ರಕ್ರಿಯೆಗೆ ಒಳಪಟ್ಟು ನನ್ನ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಯಲ್ಲಿ ಮಾರ್ಪಾಡು ಆಗಿದೆ.ಪರೀಕ್ಷೆಗೆ ಒಳಗಾಗಲು ಸಿದ್ಧವೆಂದು ನೀವು ಹೇಳಿಕೊಳ್ಳುತ್ತಿದ್ದೀರಿ. ಯಾವ ರೀತಿಯ ಪರೀಕ್ಷೆಗೆ ನೀವು ಸಿದ್ಧರಿದ್ದೀರಿ?

ಯಾವ ಪರೀಕ್ಷೆ ಅಗತ್ಯವಿದೆಯೋ ಅದಕ್ಕೆಲ್ಲ ನಾನು ಸಿದ್ಧ. ಪ್ರಕರಣದ ಇತ್ಯರ್ಥಕ್ಕಾಗಿ ನ್ಯಾಯಬದ್ಧವಾದ ಸಂಸ್ಥೆ ಕೇಳಿದರೆ ನಾನು ಯಾವುದೇ ಪರೀಕ್ಷೆಗೆ ಒಳಗಾಗಲು ತಯಾರಿದ್ದೇನೆ.ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಾಗ ಆರೋಪಿಸಲಾದ ಕೃತ್ಯದಲ್ಲಿ ನೀವು ಭಾಗಿಯಾಗಲು ಸಾಧ್ಯವೇ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ನೀವೇ ಹೇಳಿದ್ದೀರಿ. ಏನಿದರ ಅರ್ಥ?

ಈ ದೇಹ ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು ಸಮರ್ಥವಾಗಿಲ್ಲ ಎಂದು ಸಾಬೀತಾಗಲಿದೆ ಎಂಬುದೇ ಅರ್ಥ.ಅಂದರೆ ಭಾವೋತ್ಪತ್ತಿ, ಉದ್ರೇಕ, ಸ್ಖಲನ ಆಗುವುದಿಲ್ಲವೇ?

ಇಲ್ಲ. ನನ್ನ ದೇಹದಲ್ಲಿ ಅಂತಹ ಯಾವುದೇ ಜೈವಿಕ ಕ್ರಿಯೆಗಳು ನಡೆಯುವುದಿಲ್ಲ.

 

`ತೇಜೋವಧೆಗೆ ಆರತಿರಾವ್ ಬಳಕೆ~

ಆರತಿ ರಾವ್ ಎಂಬ ಮಹಿಳೆ ಯಾಕೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ?

ನೀವು ಆಕೆಯನ್ನೇ ಕೇಳಬೇಕು.ತನ್ನನ್ನು ದೈಹಿಕವಾಗಿ ಬಳಸಿಕೊಳ್ಳಲಾಯಿತು ಎಂದು ಆರತಿರಾವ್ ಬಹಿರಂಗವಾಗಿಯೇ ಆರೋಪಿ ಸಿದ್ದಾರಲ್ಲ?

ಆಕೆಯ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳಿವೆ. ನನ್ನನ್ನು ತೇಜೋವಧೆ ಮಾಡಲು ಕೆಲವರು ಆಕೆಯನ್ನು ಬಳಸಿಕೊಳ್ಳುತ್ತಿರಬೇಕು.

ಹಾಗಾದರೆ ಒಬ್ಬ ವ್ಯಕ್ತಿಯನ್ನು ಬಳಸಿಕೊಳ್ಳುವುದು ಅಷ್ಟು ಸುಲಭವೇ?

ಹೌದು.`ನೀವು ಕೂಡ ಆಕೆಯನ್ನು ಬಳಸಿಕೊಂಡಿರಿ~ ಎಂದಲ್ಲವೇ ಆಕೆ ಹೇಳಿರುವುದು?

(ನಗು) ಕೆಲವರು ಆಕೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಷ್ಟೇ ನಾನು ಹೇಳುವುದು.ಆಕೆಯನ್ನು ಯಾರೋ ಬಳಸಿಕೊಳ್ಳುತ್ತಿದ್ದಾರೆಂದೇ ಇಟ್ಟುಕೊಳ್ಳೋಣ. ನಿಮ್ಮ ಬೋಧನೆಗಳನ್ನು ಕೇಳಿ, ನಿಮ್ಮ ಶಿಷ್ಯೆಯಾಗಿದ್ದ ಆಕೆ ಇಷ್ಟು ಸುಲಭವಾಗಿ ಇಂತಹ ಆರೋಪಗಳನ್ನು ಮಾಡಲು ಸಾಧ್ಯವೇ?

ಅದು ಸಾಧ್ಯ. ಅದನ್ನೇ ನಾನು ಹೇಳುತ್ತಿರುವುದು.ಆರೋಪಕ್ಕೆ ಮಹತ್ವವಿಲ್ಲವೆಂದು ನೀವು ಹೇಳಬಹುದು. ಆದರೆ, ಅವರು ಮಾಡಿರುವ ಆರೋಪ ಸಾರ್ವಜನಿಕರ ಮೇಲೆ ಪರಿಣಾಮ ಉಂಟು ಮಾಡಿದೆಯಲ್ಲವೇ? ಆರೋಪವನ್ನು ಅಲ್ಲಗೆಳೆಯುವ ಮೂಲಕ ಸಾರ್ವಜನಿಕ ಅಭಿಪ್ರಾಯ  ನಿರ್ಲಕ್ಷಿಸುತ್ತೀರಾ?

ಆರತಿ ರಾವ್ ಹೇಳಿಕೆಯಿಂದ ಸಾರ್ವಜನಿಕರ ಮೇಲೆ ಪರಿಣಾಮ ಉಂಟಾಗಿದೆ ಎಂದಾಕ್ಷಣ ಆಕೆ ಹೇಳಿದ್ದು ಸತ್ಯವಾಗಿಬಿಡುವುದಿಲ್ಲ. ನೀವು ಆಕೆಯ ಮಾತುಗಳನ್ನು ಎರಡು ಮೂರು ಸಲ ಕೇಳಿದರೆ, ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂಬುದು ನಿಮಗೇ ಸ್ಪಷ್ಟವಾಗಿಬಿಡುತ್ತದೆ.ಕೊನೆಯದಾಗಿ ಆರತಿರಾವ್ ಬಗ್ಗೆ ಏನು ಹೇಳುತ್ತೀರಿ?

 
ಆಕೆ ಹೇಳುತ್ತಿರುವುದು ಸಂಪೂರ್ಣ ಸುಳ್ಳು. ಆಕೆ ಅದನ್ನು ಅರಿತು, ತನ್ನ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕು.

ನಿಮ್ಮದು ಸಂಪೂರ್ಣ ಪುರುಷ ದೇಹ ಆಗಿದ್ದರೂ ಅವೆಲ್ಲ ಯಾಕೆ ಸಾಧ್ಯವಿಲ್ಲ?

ನನ್ನದು ಪುರುಷ ದೇಹ, ಆದರೆ 22ನೇ ವಯಸ್ಸಿನಲ್ಲಿ ನನಗೆ ಆದ ಕೆಲವು ನಿರ್ದಿಷ್ಟ ಆಧ್ಯಾತ್ಮಿಕ ಅನುಭವಗಳ ಪರಿಣಾಮ ನನ್ನ ದೇಹ ವ್ಯವಸ್ಥೆಯಲ್ಲಿ ಬದಲಾವಣೆ ಆಯಿತು.ನೀವು ಹೇಳುತ್ತಿರುವ ಆಧ್ಯಾತ್ಮಿಕ ವಾಸ್ತವತೆಯ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ನಿಮ್ಮ ಯಾರಾದರೂ ಒಬ್ಬ ಭಕ್ತರಿಂದ ಪರೀಕ್ಷೆಗೆ ಒಳಪಟ್ಟಿದ್ದೀರಾ?

ಈ ತನಕ ಯಾವುದೇ ಶಿಷ್ಯರಿಂದ ನಾನು ಪರೀಕ್ಷೆಗೆ ಒಳಗಾಗಿಲ್ಲ.ಈ ರೀತಿ ದೈಹಿಕ ಪರಿವರ್ತನೆಗೊಳಗಾಗಿರುವ ಗುರುವಿನ ಬಗ್ಗೆ ಶಿಷ್ಯರು ಪ್ರಶ್ನಿಸಿದರೆ ತಪ್ಪೇನಿಲ್ಲವಲ್ಲ?

ಇಲ್ಲ. ಆದರೆ ಯಾರೂ ನನ್ನನ್ನು ಪರೀಕ್ಷಿಸಿಲ್ಲ.ದೇವರಿಂದ ಆಧ್ಯಾತ್ಮಿಕ ವ್ಯಕ್ತಿಗಳವರೆಗೆ, ಸಂತರಿಂದ ಸಾಮಾನ್ಯ ಮನುಷ್ಯರವರೆಗೆ ಪ್ರತಿಯೊಬ್ಬರೂ ಕಾಮಾಸಕ್ತಿಯನ್ನು ಹೊಂದಿರುತ್ತಾರೆ. ಅದು ಸಹಜ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದು ಸಮಾಜದ ಒಂದು ವರ್ಗ ನಿರೀಕ್ಷಿಸುವುದರಿಂದ ಅದು ತಪ್ಪಾಗಿ ಕಂಡುಬರಬಹದುಷ್ಟೇ. ನಿಮ್ಮನ್ನು ನೀವೇ ಸನ್ಯಾಸಿ ಅಥವಾ ಸ್ವಾಮೀಜಿ ಎಂದು ಕರೆದುಕೊಳ್ಳದೇ ಇದ್ದರೆ ಇದೆಲ್ಲ ಸಹಜವಾಗಿರುತ್ತಿತ್ತೇನೋ?

ನನ್ನ ಆಧ್ಯಾತ್ಮಿಕ ಅನುಭವದ ಪರಿಣಾಮದಿಂದಾಗಿ ಲೈಂಗಿಕ ಆಸಕ್ತಿಯನ್ನು ಕಳೆದುಕೊಂಡಿದ್ದೇನೆ. ಅದರ ಬಗ್ಗೆ ಎಂದೂ ನನಗೆ ಆಸಕ್ತಿ ಇರಲಿಲ್ಲ. ಆ ಭಾವನೆಗಳಿದ್ದಿದ್ದರೆ ನಾನು ಮದುವೆಯಾಗಿ ಸಂಸಾರಿಯಾಗುತ್ತಿದ್ದೆ.ಅಂತಹ ಆಸಕ್ತಿ ಇದ್ದಿದ್ದರೆ ಮದುವೆ ಆಗಲೇಬೇಕೆಂದೇನು ಇಲ್ಲವಲ್ಲ. ದೈಹಿಕವಾದ ಕಾಮನೆಗಳಿದ್ದರೂ ಅದನ್ನು ನಿಯಂತ್ರಿಸಿಕೊಂಡು ಇರುವವರು ಇದ್ದಾರಲ್ಲವೇ? ನೀವು ಹಾಗೆ ಇರಬಹುದಿತ್ತಲ್ಲಾ?

12ನೇ ಮತ್ತು 22ನೇ ವಯಸ್ಸಿನಲ್ಲಿ ನನ್ನ ಜೀವನದಲ್ಲಾದ ಎರಡು ಘಟನೆಗಳು ನನ್ನ ವ್ಯಕ್ತಿತ್ವವನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬದಲಾಯಿಸಿಬಿಟ್ಟವು. ಅದರ ನಂತರ ನನ್ನಲ್ಲಿ ಅಂತಹ ವಿಷಯವಾಸನೆ ಎಂದೂ ಹುಟ್ಟಿಲ್ಲ. ನಂತರದಲ್ಲಿ ವಾಂಛೆಯ ನಿಯಂತ್ರಣದ ಅಗತ್ಯ ಬರಲೇ ಇಲ್ಲ.ಲೈಂಗಿಕ ಭಾವನೆಯ ಮೇಲೆ ನಿಯಂತ್ರಣ ಸಾಧಿಸುವುದು ಮತ್ತು ಅಂತಹ ಭಾವನೆಯೇ ಇಲ್ಲದಿರುವುದು ಇವೆರಡಕ್ಕೂ ವ್ಯತ್ಯಾಸವಿದೆಯಲ್ಲವೇ? ನೀವು ಎಂದಾದರೂ ಈ ಕೊರತೆಯ ಭಾವನೆ ಅನುಭವಿಸಿದ್ದೀರಾ?

ನನಗೆ ಸಂಬಂಧಿಸಿದಂತೆ ಹೇಳುವುದಾದರೆ ನಾನು ನನ್ನ ಗುರುವಿನ ಮೂಲಕ ಕೆಲವು ವಿಶೇಷ ಯೋಗ ಮತ್ತು ಜೀವನ ಶೈಲಿ ತರಬೇತಿ ಪಡೆದಿದ್ದೇನೆ. ಅದರ ಪರಿಣಾಮವಾಗಿ ನನ್ನ ದೇಹ ಈ ರೀತಿ ಅರಳಿದೆ. ಆ ಬಗ್ಗೆ ನನಗೆ ಸಂತೋಷವಿದೆ.ಯಾರಾದರೂ ನಿಮ್ಮ ಮೇಲೆ ದೈಹಿಕ ಆಸಕ್ತಿ ತೋರಿಸಿರುವರೇ?

ಇಲ್ಲ.ಭಕ್ತರಲ್ಲಿ ಯಾರಾದರೂ ಒಬ್ಬರು, ನೀವು ಹೆಸರು ಹೇಳುವ ಅಗತ್ಯವಿಲ್ಲ. ಯಾರಾದರೂ ಒಬ್ಬ ಶಿಷ್ಯ ನಿಮಗೆ ಸಂಪೂರ್ಣವಾಗಿ ಶರಣಾಗಲು ಬಯಸಿದ್ದರೇ? ಯಾರಾದರೂ ಮಹಿಳೆ ನಿಮ್ಮ ದೇಹ ಸಾಮಿಪ್ಯಕ್ಕಾಗಿ ಸಂಪರ್ಕಿಸಿದ್ದಳೇ?

ಇಲ್ಲ, ಇಲ್ಲ, ಇಲ್ಲ, ಇಲ್ಲ (ನಗು)ನಿಮಗೆ ಯಾರಾದರೂ ಲೈಂಗಿಕ ಸೂಚನೆ ನೀಡಿದ್ದರೇ?

ಇಲ್ಲ.ಭವಿಷ್ಯದಲ್ಲಿ ಅಂತಹ ಯಾವ ಸಾಧ್ಯತೆ ಇಲ್ಲವೇ?

ಇಲ್ಲ. ಈಗ ಪ್ರತಿಯೊಬ್ಬರೂ ನನ್ನನ್ನು ತಿಳಿದುಕೊಂಡಿದ್ದಾರೆ. ನಾನು ಈಗಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದೇನೆ; ದೇಹದಿಂದಾಚೆಗಿನ ಪರಿಸರದಲ್ಲಿ ನಾನು ಜೀವಿಸುತ್ತಿರುವೆ ಎಂದು.ಪದೇ ಪದೇ ನಿಮ್ಮನ್ನು ಅತ್ಯಾಚಾರಿ, ಕಾಮ ಪಿಪಾಸು ಎಂದೆಲ್ಲ ಜನರು ಕರೆದರೆ ನಿಮಗೆ ಏನನಿಸುತ್ತದೆ?

ಇದೇ ಕಾರಣಕ್ಕಾಗಿ ನಾನು ಬಂಧನಕ್ಕೆ ಒಳಗಾದ ದಿನ ನನ್ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ವರದಿ ಮಂಡಿಸುವಂತೆ ಮನವಿ ಮಾಡಿದೆ. ಆ ಸಮಯದಲ್ಲಿ ಏಕೆ ಮಾಡಲಿಲ್ಲವೋ ನನಗೆ ಗೊತ್ತಿಲ್ಲ.ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲವು ಯೋಗ ತಂತ್ರಗಳಿಂದ ನಿಮ್ಮನ್ನು ನೀವು ನಿಯಂತ್ರಿಸಿಕೊಂಡು ಬಿಡುತ್ತೀರಿ ಎಂದು ಕೆಲವರು ಹೇಳುತ್ತಾರಲ್ಲ?

(ನಗು) ನಾನು ಯೋಗಿ ಆದ ಮೇಲೆ ಎಲ್ಲ ಕಾಲಕ್ಕೂ ನನ್ನನ್ನು ನಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಮರ್ಥನಾಗಿರುವುದಿಲ್ಲವೇ?ನೀವು ಎಂದಾದರೂ ಮಹಿಳೆ ಬಗ್ಗೆ  ದೈಹಿಕವಾಗಿ ಆಕರ್ಷಿತರಾಗಿದ್ದೀರಾ?

ಇಲ್ಲಪುರುಷರ ಬಗ್ಗೆ ಆಕರ್ಷಣೆ ಉಂಟಾಗಿತ್ತೇ?

ಇಲ್ಲನಿಮಗೆ ಯಾವುದರ ಬಗ್ಗೆಯಾದರೂ ದೈಹಿಕವಾಗಿ ಆಕರ್ಷಣೆ ಉಂಟಾಗುವುದೇ?

ಅರುಣಾಚಲ ಬೆಟ್ಟದ ಬಗ್ಗೆ ಮಾತ್ರ ನಾನು ದೈಹಿಕವಾಗಿ ಆಕರ್ಷಿತನಾಗುವೆ. ಆ ಬೆಟ್ಟ ನನ್ನಲ್ಲಿ ಅತ್ಯಮೋಘವಾದ ಸಂತೋಷ, ಸಂಭ್ರಮವನ್ನು ಉಂಟು ಮಾಡುತ್ತದೆಆಧ್ಯಾತ್ಮಿಕ ಶಕ್ತಿಯ ಬಗ್ಗೆಯೂ ನಿಮ್ಮ ದೇಹದಲ್ಲಿ ಆಕರ್ಷಣೆ ಮೂಡಿಲ್ಲವೇ?

ಹಾಗೇನೂ ಇಲ್ಲ. ನಾನು ಅರುಣಾಚಲ ಬೆಟ್ಟವನ್ನು ನೋಡಿದಾಗ ನನ್ನ ಇಡೀ ಶರೀರ ಹೆಚ್ಚು ಜೀವಂತವಾದಂತೆ ಭಾಸವಾಗುತ್ತದೆ. ಅಂತಹ ಅನುಭೂತಿಯನ್ನು ನಾನು ಬೇರಾವುದರಲ್ಲೂ ಪಡೆದಿಲ್ಲ.ನಿಮ್ಮ ತಾಯಿಯೊಂದಿಗೆ ಎಂತಹ ಸಂಬಂಧ ಇರಿಸಿಕೊಂಡಿದ್ದೀರಾ?

ಹೆಚ್ಚು ಕಡಿಮೆ ಅವರು ನನ್ನ ಶಿಷ್ಯೆಯಂತೆ ಅಥವಾ ನಮ್ಮ ಸನ್ಯಾಸಿಗಳಲ್ಲಿ ಒಬ್ಬರಂತೆ. ನನ್ನ ತಂದೆ ನಿಧನರಾದ ಮೇಲೆ ನನ್ನ ತಾಯಿ ಸನ್ಯಾಸ ಸ್ವೀಕರಿಸಿದರು.ಆಧ್ಯಾತ್ಮಿಕ ಕಾರಣಕ್ಕಾಗಿಯೇ ಕೆಲ ಮಹಿಳೆಯರಿಗೆ ಖಾಸಗಿಯಾಗಿ ನಿಮ್ಮಂದಿಗೆ ಸಮಯ ಕಳೆಯಲು ಅವಕಾಶ ನೀಡಿದ್ದೀರಾ?

ಎಂದೆಂದಿಗೂ ಇಲ್ಲ. ಈ ಕಾರಣಕ್ಕಾಗಿಯೇ ನನ್ನ ಎಲ್ಲ ಭೇಟಿಗಳು ಸಾರ್ವಜನಿಕವಾಗಿಯೇ ಇರಬೇಕೆಂಬ ನಿಯಮ ಮಾಡಿದ್ದೇನೆ.ನೀವು ವಿಶೇಷ ಸಾಮರ್ಥ್ಯ ಹೊಂದಿರುವ ವ್ಯಕ್ತಿಯೆಂದೂ ಅತಿ ಮಾನವ ಗುಣಗಳನ್ನು ಹೊಂದಿರುವ ವ್ಯಕ್ತಿಯೆಂದೂ ಕೆಲವರು ಹೇಳುತ್ತಾರೆ. ಅದೇ ಜನ ನಿಮಗೆ ಕೆಲವು ದೌರ್ಬಲ್ಯಗಳಿವೆ, ಅದನ್ನು ನೀವು ಮೊದಲು  ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ. ಅದೇ ನಿಮ್ಮ ಸಮಸ್ಯೆ. ನಿಮ್ಮನ್ನು ನೀವು ಬಿಂಬಿಸಿಕೊಳ್ಳುವ ಮಟ್ಟದಲ್ಲಿ ನೀವಿಲ್ಲ ಎಂಬುದು ಅವರ ವಾದ. ಏನು ಹೇಳುತ್ತಿರಿ?

ಇದು ಅವರಿಗೇ ಬಿಟ್ಟದ್ದು.ನಿಮಗೆ ಕಾಮಾಸಕ್ತಿ ಇಲ್ಲವೆಂಬುದನ್ನು 2010ರ ನಂತರ ಅಂದರೆ ದೂರುಗಳು ಬಂದ ಮೇಲೆ ಹೇಳುತ್ತಿದ್ದೀರ?

ನಾನು ಗಂಡು ಅಲ್ಲ, ಹೆಣ್ಣು ಅಲ್ಲ ಎಂದು 2004ರಿಂದ 2006ರವರೆಗೆ ಹೇಳಿರುವುದಕ್ಕೆ ವಿಡಿಯೋ ದಾಖಲೆಗಳಿವೆ. ಅಮೆರಿಕದ ಮೂರು ವಿಶ್ವವಿದ್ಯಾಲಯಗಳು ನನ್ನ ಮೆದುಳನ್ನು ಪರೀಕ್ಷೆಗೆ ಒಳಪಡಿಸಿದವು.ನಾನು ಪರೀಕ್ಷೆಗೆ ಒಳಪಟ್ಟಿದ್ದಕ್ಕೆ ಕಾರಣವಿದೆ. ಏಕೆಂದರೆ ನನ್ನ ಬಗ್ಗೆಯೇ ಕುತೂಹಲವಿತ್ತು. ಆ ಪರೀಕ್ಷೆಗಳ ಪ್ರಕಾರ ನನಗೆ ಕಾಮಾಸಕ್ತಿ ಇಲ್ಲ; ಕನಸುಗಳೂ ಬೀಳುತ್ತಿರಲಿಲ್ಲ; ಸದಾ ಆನಂದವನ್ನು ಅನುಭವಿಸುವೆ. ಆ ಪರೀಕ್ಷಾ ವರದಿಗಳನ್ನು ಸಕಾಲದಲ್ಲಿ ಕೋರ್ಟ್‌ಗೂ ಸಲ್ಲಿಸುವೆ.ನಿಮ್ಮನ್ನು `ಸೆಕ್ಸ್ ಸ್ವಾಮಿ~ ಎಂದು ಕರೆದರೆ ಏನನಿಸುತ್ತದೆ?

ಅದು ಸಂಪೂರ್ಣ ಸುಳ್ಳು. ಹೀಗಾಗಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ.ಹಾಗೆ ಕರೆಯುವುದರಿಂದ ನಿಮಗೆ ನೋವಾಗುವುದೇ? ನಿಮ್ಮ ಇಮೇಜ್‌ಗೆ ಹಾನಿಯಾಗುವುದೇ?

ಆರೋಪಗಳು ನನ್ನ ಇಮೇಜ್‌ಗೆ ಧಕ್ಕೆ ಉಂಟು ಮಾಡಬಹುದೇ ಹೊರತು ನನ್ನನ್ನು ಘಾಸಿಗೊಳಿಸುವುದಿಲ್ಲ. ಒಂದು ವ್ಯಕ್ತಿತ್ವವಾಗಿ ನಾನು ಏನೆಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ನನಗೆ ನನ್ನ ಬಗ್ಗೆ ಇರುವ ಅನುಭವವನ್ನು ಈ ಯಾವುದೇ ವಿವಾದ ಅಥವಾ ಮೊಕದ್ದಮೆಗಳು ಬದಲಾಯಿಸಲು ಸಾಧ್ಯವಿಲ್ಲ.(ನಾಳೆ: `ಆಶ್ರಮದ ಆಸ್ತಿ ಕಬಳಿಸುವ ಹುನ್ನಾರ~)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.