ಬುಧವಾರ, ನವೆಂಬರ್ 20, 2019
22 °C

ಕಾಮಿಕ್ ದಂತಕಥೆ ಕಾರ್ಮೈನ್ ಇನ್ನಿಲ್ಲ

Published:
Updated:

ಲಾಸ್ ಏಂಜಲೀಸ್ (ಪಿಟಿಐ):ಕಾಮಿಕ್ ದಂತಕಥೆ ಕಾರ್ಮೈನ್  ಇನ್‌ಫ್ಯಾಂಟಿನೊ (87) ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಇದರೊಂದಿಗೆ ಅವರ 5 ದಶಕಗಳ ಸುದೀರ್ಘ ವೃತ್ತಿ ಜೀವನ ಅಂತ್ಯವಾಗಿದೆ. ಕಾಮಿಕ್ (ವಿನೋದ/ಹಾಸ್ಯ ಚಿತ್ರಮಾಲಿಕೆ) ಪುಸ್ತಕ ಕಲಾವಿದ- ಸಂಪಾದಕರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ಹುಟ್ಟಿ, ಬೆಳೆದ ಇನ್‌ಫ್ಯಾಂಟಿನೊ 1960ರಲ್ಲಿ ಡಿ.ಸಿ., ಮಾರ್ವೆಲ್ ಮತ್ತು ಇತರ ಕಾಮಿಕ್‌ಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೇ `ಬ್ಯಾಟ್‌ಮ್ಯಾನ್' ಮರುವಿನ್ಯಾಸಗೊಳಿಸಿದ್ದರು. ಅದೇ ವರ್ಷ ಡಿ.ಸಿ ಕಾಮಿಕ್‌ನಲ್ಲಿ ಸಂಪಾದಕೀಯ ನಿರ್ದೇಶಕರಾಗಿ ನೇಮಕಗೊಂಡಿದ್ದರು.1970ರ ದಶಕದಲ್ಲಿ ಐದು ವರ್ಷ ಡಿ.ಸಿ. ಕಾಮಿಕ್‌ನ ಮುದ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬಳಿಕ `ಡಿ.ಸಿ/ಮಾರ್ವೆಲ್ ಕ್ರಾಸ್‌ಓವರ್ ಟೈಟಲ್ ಸೂಪರ್‌ಮ್ಯಾನ್ ವರ್ಸಸ್ ದಿ ಅಮೇಜಿಂಗ್ ಸ್ಪೈಡರ್‌ಮ್ಯಾನ್: ದಿ ಬ್ಯಾಟ್ಲ್ ಆಫ್ ದಿ ಸೆಂಚ್ಯುರಿ'ಯಲ್ಲಿ ತೊಡಗಿಸಿಕೊಂಡಿದ್ದರು. 2000ನೇ ಇಸ್ವಿಯಲ್ಲಿ `ಕಾಮಿಕ್ ಬುಕ್ ಹಾಲ್ ಆಫ್ ದಿ ಫೇಮ್'ನಲ್ಲಿ ಇನ್‌ಫ್ಯಾಂಟಿನೋ ಅವರನ್ನು ಸೇರಿಸಲಾಗಿತ್ತು. ನಂತರ ಅವರ ಹೆಸರು ಕಾಯಂ ಆಗಿ ಅದರಲ್ಲಿ ಮುಂದುವರಿದಿತ್ತು. ಡಿ.ಸಿ ಕಾಮಿಕ್ ಅಧ್ಯಕ್ಷ ಡಯಾನ್ ನೆಲ್ಸನ್, ಇನ್‌ಫ್ಯಾಂಟಿನೊ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.`ಇನ್‌ಫ್ಯಾಂಟಿನೊ ನಿಧನದಿಂದ ಡಿ.ಸಿ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಅವರು ನೀಡಿರುವ ಕೊಡುಗೆ ಬಣ್ಣಿಸಲಸಾಧ್ಯ' ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)