ಕಾಮಿಕ್ ಸೀತೆಗೆ ಸುನಿಧಿ ಕಂಠ

7

ಕಾಮಿಕ್ ಸೀತೆಗೆ ಸುನಿಧಿ ಕಂಠ

Published:
Updated:
ಕಾಮಿಕ್ ಸೀತೆಗೆ ಸುನಿಧಿ ಕಂಠ

ಕಾಮಿಕ್ ಪುಸ್ತಕಗಳನ್ನು ಬಿಡುಗಡೆ ಮಾಡಿದ 45 ವರ್ಷಗಳ ನಂತರ ಅಮರ್ ಚಿತ್ರ ಕಥಾ, ಈ ಬಾರಿ ಕಾರ್ಟೂನ್ ನೆಟ್‌ವರ್ಕ್ ಸಹಭಾಗಿತ್ವದಲ್ಲಿ ತನ್ನ ಮೊಟ್ಟಮೊದಲ ಸಾಕ್ಷ್ಯಚಿತ್ರವಾಗಿರುವ `ಸನ್ಸ್ ಆಫ್ ರಾಮ್- ಹೀರೋಸ್ ವಿಲ್ ರೈಸ್ ಅನ್ನು 2012ರ ನವೆಂಬರ್ 2ರಂದು ಬಿಡುಗಡೆ ಮಾಡುತ್ತಿದೆ.ಅಮರ್ ಚಿತ್ರ ಕಥಾ ಸಂಸ್ಥೆ `ಸನ್ಸ್ ಆಫ್ ರಾಮ್- ಹೀರೋಸ್ ವಿಲ್ ರೈಸ್~ 3ಡಿ ಮತ್ತು 2ಡಿ ಕಥಾಚಿತ್ರವನ್ನು ದೇಶದ 400 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದು, ಇದು ಅಮರ್ ಚಿತ್ರ ಕಥಾ ಮತ್ತು ಟಿಂಕಲ್ ಅಭಿಮಾನಿಗಳಿಗೆ ದೀಪಾವಳಿಗೆ ಮುನ್ನ ಸಿಗುತ್ತಿರುವ ಡಬಲ್ ಟ್ರೀಟ್ ಆಗಲಿದೆ.ಇದರೊಂದಿಗೆ ಪ್ರೀತಿಯ ಶಿಕಾರಿ ಶಂಭುವನ್ನು ಒಳಗೊಂಡ `ಶಿಕಾರಿ ಶಂಭು ಅಂಡ್ ದ ಮ್ಯಾನ್ ಈಟರ್~ ಎಂಬ ವಿಶೇಷ ಕಿರುಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ. ಶಿಕಾರಿ ಶಂಭು ತೆರೆಗೆ ಬರುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಕಿರುಚಿತ್ರವನ್ನು `ಸನ್ಸ್ ಆಫ್ ರಾಮ್~ ಪ್ರದರ್ಶನಗೊಳ್ಳುವುದಕ್ಕಿಂತ ಮೊದಲು ಪ್ರದರ್ಶಿಸಲಾಗುತ್ತದೆ. ``ಸನ್ಸ್ ಆಫ್ ರಾಮ್ ಮತ್ತು ಶಿಕಾರಿ ಶಂಭು ಮೂಲಕ ನೀಡುತ್ತಿರುವ ಡಬಲ್ ಟ್ರೀಟ್ ಮಕ್ಕಳನ್ನು ಮತ್ತು ಅವರ ಕುಟುಂಬವನ್ನು ಹಿಂದೆಂದಿಗಿಂತಲೂ ಹೆಚ್ಚು ಸಂತೋಷಪಡಿಸಲಿದೆ.

ಜತೆಗೆ ದೀಪಾವಳಿಯ ಸಂಭ್ರಮಕ್ಕೆ ಚಾಲನೆ ನೀಡಲು ಇದೊಂದು ಅದ್ಭುತ ಅವಕಾಶವಾಗಿದೆ. ಈ ಅಪ್ರತಿಮ ಹೀರೋಗಳನ್ನು ಬೆಳ್ಳಿ ಪರದೆಯ ಮೇಲೆ ತರುತ್ತಿರುವುದಕ್ಕೆ ಎ.ಸಿ.ಕೆ ಮೀಡಿಯಾ ಹೆಮ್ಮೆಪಡುತ್ತದೆ~ ಎನ್ನುತ್ತಾರೆ ಎ.ಸಿ.ಕೆ ಮೀಡಿಯಾ ಸಿಇಒ ವಿಜಯ್ ಸಂಪತ್. `ಸನ್ಸ್ ಆಫ್ ರಾಮ್~ ಸಾಕ್ಷ್ಯಚಿತ್ರವನ್ನು ಎ.ಸಿ.ಕೆ ಅನಿಮೇಷನ್ ಸ್ಟುಡಿಯೋದ ಪ್ರಶಸ್ತಿ ವಿಜೇತ ತಂಡದ ಕುಶಾಲ್ ನಿರ್ದೇಶಿಸಿದ್ದಾರೆ. ಸೀತಾ ಪಾತ್ರಕ್ಕೆ ಸುನಿಧಿ ಚೌಹಾಣ್ ಕಂಠದಾನ ಮಾಡಿದ್ದಾರೆ.

ನಾಲ್ಕು ಹೊಸ ಹಾಡುಗಳು ಮತ್ತು ಅಂತರರಾಷ್ಟ್ರೀಯ ಅನಿಮೇಷನ್ ಒಳಗೊಂಡಿರುವ ಚಿತ್ರವು ಇಡೀ ಕುಟುಂಬಕ್ಕೆ ಸಮೃದ್ಧ ಮನರಂಜನೆ ನೀಡಲಿದೆ. ಈ ಚಿತ್ರವು ಹಿಂದಿ, ಇಂಗ್ಲಿಷ್, ತಮಿಳು ಮತ್ತು ತೆಲುಗು ಸೇರಿ ನಾಲ್ಕು ಭಾಷೆಗಳಲ್ಲಿದ್ದು, ದೀಪಾವಳಿ ರಜೆಯ ಮೊದಲ ದಿನ, 2012ರ ನವೆಂಬರ್ 2ರಂದು ಭಾರತ ಹಾಗೂ ಸಾಗರದಾಚೆ ಸೇರಿದಂತೆ ಒಟ್ಟು 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಆಯ್ದ ಚಿತ್ರಮಂದಿಗಳಲ್ಲಿ ಇದು 3ಡಿಯಲ್ಲಿ ಪ್ರದರ್ಶನಗೊಳ್ಳಲಿದೆ. `ಅಮರ್ ಚಿತ್ರ ಕಥಾ~ದ ಅತಿ ಹೆಚ್ಚು ಮಾರಾಟಗೊಂಡಿರುವ ಕಾಮಿಕ್ `ಸನ್ಸ್ ಆಫ್ ರಾಮ್~ ಮೇಲೆ ಆಧಾರಿತವಾಗಿರುವ ಚಿತ್ರವು ಲವ ಮತ್ತು ಕುಶ ಸಹೋದರರು ತಮ್ಮ ಪೂರ್ವಿಕರಿದ್ದ ಅಯೋಧ್ಯೆ ತಲುಪುವ ಹಾದಿಯಲ್ಲಿ ಕಾಡು ಮೇಡಿನಲ್ಲಿ ಮಾಡುವ ಸಾಹಸಗಳನ್ನು ಬಣ್ಣಿಸುತ್ತದೆ.

ಎಲ್ಲರೂ ಇಷ್ಟಪಡುವ ಪಾತ್ರಗಳ ಗ್ಯಾಂಗನ್ನು ಒಳಗೊಂಡಿರುವ ಈ ಕಥಾಚಿತ್ರವು ಹಿಂದೆಂದೂ ಕಂಡರಿಯದ ಮೋಜನ್ನು ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry