ಕಾಮೆಡ್-ಕೆ: ಕೌನ್ಸೆಲಿಂಗ್ ಆರಂಭ

ಗುರುವಾರ , ಜೂಲೈ 18, 2019
24 °C

ಕಾಮೆಡ್-ಕೆ: ಕೌನ್ಸೆಲಿಂಗ್ ಆರಂಭ

Published:
Updated:

ಬೆಂಗಳೂರು: ಕಾಮೆಡ್ - ಕೆ ಕೋಟಾದ ಎಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ ಶುಕ್ರವಾರ ಕೌನ್ಸೆಲಿಂಗ್ ಆರಂಭವಾಗಿದ್ದು, ಮೊದಲ ದಿನ 1,052 ಮಂದಿ ಸೀಟು ಆಯ್ಕೆ ಮಾಡಿಕೊಂಡಿದ್ದಾರೆ.ಶುಕ್ರವಾರದಿಂದ ಆರಂಭವಾಗಿರುವ ಮೊದಲ ಸುತ್ತಿನ ಕೌನ್ಸೆಲಿಂಗ್ ಈ ತಿಂಗಳ 16ರವರೆಗೂ ನಡೆಯಲಿದೆ. ಮೊದಲ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಂಡ ನಂತರ 16,878 ಸೀಟುಗಳು ಖಾಲಿ ಇವೆ ಎಂದು ಕಾಮೆಡ್ - ಕೆ ಮೂಲಗಳು ತಿಳಿಸಿವೆ.ಮೊದಲ ದಿನ ಒಂದರಿಂದ 2550 ರ‍್ಯಾಂಕ್‌ವರೆಗಿನ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಿತು. ಶನಿವಾರ 2551ರಿಂದ 5100 ರ‍್ಯಾಂಕ್‌ವರೆಗಿನ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry