ಕಾಮೆಡ್-ಕೆ ಪರೀಕ್ಷೆ: ಸರಿ ಉತ್ತರ ಪ್ರಕಟ

7

ಕಾಮೆಡ್-ಕೆ ಪರೀಕ್ಷೆ: ಸರಿ ಉತ್ತರ ಪ್ರಕಟ

Published:
Updated:

ಬೆಂಗಳೂರು: `ಕಾಮೆಡ್-ಕೆ~ ಸಂಯೋಜಿತ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕಾಲೇಜುಗಳ ಪ್ರವೇಶ ಪರೀಕ್ಷೆಯ ಸರಿ ಉತ್ತರಗಳು (www.comedk.org) ವೆಬ್‌ಸೈಟ್‌ನಲ್ಲಿ ಪ್ರಕಟವಾಗಿವೆ.ಭಾನುವಾರ ನಡೆದ ಪರೀಕ್ಷೆಯ ವೈದ್ಯಕೀಯ ವಿಭಾಗದಲ್ಲಿ ಶೇಕಡ 88.91 ಮತ್ತು ದಂತವೈದ್ಯಕೀಯ ವಿಭಾಗದಲ್ಲಿ ಶೇಕಡ 92.85ರಷ್ಟು ವಿದ್ಯಾರ್ಥಿಗಳು ಹಾಜರಾದರು.`ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿದ್ದ ಬಿಗಿ ಕ್ರಮಗಳು ಫಲ ನೀಡಿವೆ. ಯಾವುದೇ ಕೇಂದ್ರದಲ್ಲೂ ಪರೀಕ್ಷಾ ಅಕ್ರಮ ನಡೆದಿಲ್ಲ. ಸರಿ ಉತ್ತರಗಳಿಗೆ ಇದೇ 16ರ ಒಳಗೆ ಆಕ್ಷೇಪಣೆ ಸಲ್ಲಿಸಬಹುದು~ ಎಂದು `ಕಾಮೆಡ್-ಕೆ~ ಮುಖ್ಯ ಕಾರ್ಯನಿರ್ವಾಹಕ ಎ.ಎಸ್. ಶ್ರೀಕಾಂತ್ `ಪ್ರಜಾವಾಣಿ~ಗೆ ತಿಳಿಸಿದರು. ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 18,418 ವಿದ್ಯಾರ್ಥಿಗಳ ಪೈಕಿ 16,593 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಪ್ರವೇಶ ನಿರಾಕರಣೆ: ಪರೀಕ್ಷೆಯ ಪ್ರವೇಶ ಪತ್ರದ ಜೊತೆ ಭಾವಚಿತ್ರ ಇರುವ ಗುರುತಿನ ಚೀಟಿ ತರುವಲ್ಲಿ ವಿಫಲರಾದ ಒಟ್ಟು 105 ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅನುಮತಿ ನೀಡಲಾಗಿಲ್ಲ. ಈ ಸಂಬಂಧ ಅಳಲು ತೋಡಿಕೊಂಡ ಕೆಲವು ವಿದ್ಯಾರ್ಥಿಗಳು, `ನಮ್ಮ ಬಳಿ ಭಾವಚಿತ್ರ ಇರುವ ಗುರುತಿನ ಚೀಟಿಯ ನೆರಳಚ್ಚು ಪ್ರತಿ ಇತ್ತು. ಆದರೂ ನಮಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ~ ಎಂದು ಹೇಳಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಶ್ರೀಕಾಂತ್ ಅವರು, `ಪ್ರವೇಶ ಪತ್ರದ ಜೊತೆ ವಿದ್ಯಾರ್ಥಿಯ ಭಾವಚಿತ್ರ ಇರುವ ಕನಿಷ್ಠ ಒಂದು ಗುರುತಿನ ಚೀಟಿಯನ್ನು ತರುವುದು ಕಡ್ಡಾಯ ಎಂದು ಹಿಂದೆಯೇ ಸ್ಪಷ್ಟವಾಗಿ ಸೂಚಿಸಲಾಗಿತ್ತು.ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ತಡೆಯಲು ಬಿಗಿ ಕ್ರಮ ಅನಿವಾರ್ಯ. ಕೌನ್ಸೆಲಿಂಗ್ ಸಮಯದಲ್ಲೂ ಬಿಗಿ ಕ್ರಮ ಅನುಸರಿಸಲಾಗುವುದು. ಪರೀಕ್ಷೆಗೆ ತಂದಿದ್ದ ಗುರುತಿನ ಚೀಟಿಯನ್ನೇ ಕೌನ್ಸೆಲಿಂಗ್ ಸಂದರ್ಭದಲ್ಲೂ ತರಬೇಕು~ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry